Category: Nayamthi

ನ್ಯಾಮತಿ ಬಸವನಹಳ್ಳಿ ಗ್ರಾಮದಲ್ಲಿ ಶವಸಂಸ್ಕಾರ ಮಾಡಲಿಕ್ಕೆ ರುದ್ರ ಭೂಮಿ ಇಲ್ಲ ಎಂದು ಗ್ರಾಮ ಪಂಚಾಯಿತಿ ಕಚೇರಿ ಒಳಗಡೆ ಶವವಿಟ್ಟು ಕುಟುಂಬಸ್ಥರಿಂದ ಪ್ರತಿಭಟನೆ.

ನ್ಯಾಮತಿ: ತಾಲೂಕು ಬಸವನಹಳ್ಳಿ ಗ್ರಾಮದಲ್ಲಿ ಹೆಣ ಹೂಳಲಿಕ್ಕೆ ರುದ್ರ ಭೂಮಿ ಇಲ್ಲ ಎಂದು ವಯೋಸಹಜವಾಗಿ ಮೃತಪಟ್ಟ ಗ್ರಾಮದ ದೊಡ್ಡಪ್ಪ (65) ಎಂಬವರ ಶವವನ್ನು ಗ್ರಾಮ ಪಂಚಾಯಿತಿಯಲ್ಲಿ ಒಳಗಡೆ ಇಟ್ಟು ಪ್ರತಿಭಟಿಸಿದ ಘಟನೆ ನಡೆಯಿತು.ರುದ್ರ ಭೂಮಿಗೆ ನಿಗದಿಯಾಗಿದ್ದ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಲು ತೆರಳಿದ್ದ…

ನ್ಯಾಮತಿ ತಾಲೂಕು ಕೊಡತಾಳ ಗ್ರಾಮದಲ್ಲಿ ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಯ ಅಡ್ಡ ಪಲ್ಲಕ್ಕಿ ಉತ್ಸವ ನೆರವೇರಿಸಿದರು.

ನ್ಯಾಮತಿ ತಾಲೂಕಿನ ಕೊಡತಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗುಳ್ಳೇಮಾರಮ್ಮದೇವಿ ಮತ್ತು ಶ್ರೀ ಮಾತೆಂಗಮ್ಮದೇವಿ ದೇವಸ್ಥಾನದ ಪ್ರವೇಶ ಮತ್ತು ಪ್ರತಿಷ್ಟಾಪನೆ ಹಾಗೂ ಗೋಪುರ ಕಳಸಾರೋಹಣ ಕಾರ್ಯಕ್ರಮ ಜರುಗಿತು. ಅಧ್ಯಕ್ಷತೆಯನ್ನು ವಹಿಸಿ ಶಾಸಕ ಡಿ.ಜಿ.ಶಾಂತನಗೌಡರು ಧರ್ಮಸಭೆ ಕುರಿತು ಮಾತನಾಡಿದ ಅವರು ಹೊನ್ನಾಳಿ ಚೆನ್ನಮಲ್ಲಿಕಾರ್ಜುನ…

ತಾಯಿಯೇ ಮೊದಲ ಗುರು ಮನೆಯೆ ಮೊದಲ ಪಾಠ ಶಾಲೆ ಎಂದ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜೀ.

ನ್ಯಾಮತಿ ಃ ತಾಯಿಯೇ ಮೊದಲ ಗುರು ಮನೆಯೆ ಮೊದಲ ಪಾಠ ಶಾಲೆ ತಾಯಿಯ ಸಂಸ್ಕಾರದಿಂದ ಮಾತ್ರ ವ್ಯಕ್ತಿ ,ಕುಟುಂಬ ನಾಡಿನ ಸಂಸ್ಕಾರವಂತ ಪ್ರಜೆ ಆಗಲು ಸಾಧ್ಯ ಇದೆ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜೀ ಹೇಳಿದರು.ತಾಲೂಕಿನ ರಾಮೇಶ್ವರ…

ನ್ಯಾಮತಿ ತಾಲೂಕು ಕೊಡಚಕೊಂಡನಹಳ್ಳಿ ಅಲ್ಪಸಂಖ್ಯಾತ ವಸತಿ ಶಾಲೆಗೆ ಒಂದು ಕೋಟಿ 50 ಲಕ್ಷ ವೆಚ್ಚದ ಕಾಂಪೌಂಡ್ ನಿರ್ಮಾಣ.

ನ್ಯಾಮತಿ: ತಾಲೂಕು ಕೊಡಚಕೊಂಡನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಅಲ್ಪಸಂಖ್ಯಾತ ವಸತಿಯುತ ಶಾಲೆಗೆ ಒಂದು ಕೋಟಿ 50 ಲಕ್ಷ ವೆಚ್ಚದ ಕಾಂಪೌಂಡ್ ನಿರ್ಮಾಣಕ್ಕೆ ಹಣ ಮಂಜೂರಾಗಿದ್ದು ಸ್ಥಳ ವೀಕ್ಷಣೆಯನ್ನು ತಾಲೂಕಿನ ಶಾಸಕ ಡಿ ಜಿ ಶಾಂತನಗೌಡ್ರು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು. ತಹಸಿಲ್ದಾರ್…

ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಎಚ್.ಮಹೇಶ್ವರಪ್ಪ ಆಯ್ಕೆ.

ನ್ಯಾಮತಿ: ಜಾಗತಿಕ ಲಿಂಗಾಯತ ಮಹಾಸಭಾ ನ್ಯಾಮತಿ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಯರಗನಾಳ್ ಎಚ್. ಮಹೇಶ್ವರಪ್ಪ ಅವರು ಅವಿರೋಧವಾಗಿ ಆಯ್ಕೆಯಾದರು.ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಮಾದನಬಾವಿ ನಂಜಪ್ಪಗೌಡರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.ನೂತನ ಪದಾಧಿಕಾರಿಗಳಾಗಿ…

ನ್ಯಾಮತಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಗ್ರಂಥಾಲಯ ಸಪ್ತಾಹ ಮತ್ತು ಕನ್ನಡ ಸಾಹಿತ್ಯ ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮ.

ನ್ಯಾಮತಿ: ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ಶುಕ್ರವಾರ ಗ್ರಂಥಾಲಯ ಸಪ್ತಾಹ ಮತ್ತು ಕನ್ನಡ ಸಾಹಿತ್ಯ ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮ ನಡೆಯಿತು.ವಿದ್ಯಾರ್ಥಿ ದೆಸೆಯಿಂದಲೇ ಪುಸ್ತಕ ಓದುವ ಹಾಗೂ ಗ್ರಂಥಾಲಯದ ನಂಟು ಬೆಳೆದರೆ ಆ ವಿದ್ಯಾರ್ಥಿ ಜ್ಞಾನದ ಹೂರಣವನ್ನೇ ಹೊಂದಬಲ್ಲ ಎಂದು ಕಸಾಪ…

ನ್ಯಾಮತಿ ಮತ್ತು ಸುತ್ತಮುತ್ತಲ ಗ್ರಾಮಗಳ ರೈತರಿಗೆ ಅಪರಿಚಿತ ವ್ಯಕ್ತಿಗಳು ನಂಬಿಸಿ ನಕಲಿ ಏಲಕ್ಕಿ ಸಸಿಗಳನ್ನು ನೀಡಿದ್ದು, ಮೋಸ ಹೋದ ರೈತರು.

ನ್ಯಾಮತಿ: ವ್ಯವಸಾಯದಲ್ಲಿ ಹೊಸದು ಏನಾದರೂ ಮಾಡಬೇಕು ಎಂಬ ಆಸೆಯಿಂದ ಅಡಕೆ ತೋಟದಲ್ಲಿ ಏಲಕ್ಕಿ ಗಿಡಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಲು ಹೊರಟ ರೈತರುಅಪರಿಚಿತರಿಂದ ವಂಚನೆಗೊಳಗಾದ ಪ್ರಕರಣ ತಾಲ್ಲೂಕಿನಲ್ಲಿ ನಡೆದಿದೆ.ಏಲಕ್ಕಿ ಬೆಳೆಗೆ ಉತ್ತಮ ಮಾರುಕಟ್ಟೆ ಇದೆ.ನೀವು ಏಲಕ್ಕಿ ಬೆಳೆದು ಲಾಭ ಗಳಿಸಬಹುದು ಎಂದು ರೈತರಿಗೆ…

ನ್ಯಾಮತಿ ಪಟ್ಟಣದಲ್ಲಿ ದೀಪಾವಳಿ ಲಕ್ಷ್ಮಿ ಪೂಜೆಗಾಗಿ ಮಾರುಕಟ್ಟೆಯಲ್ಲಿ ಭರಾಟೆಯಿಂದ ಖರೀದಿ.

ನ್ಯಾಮತಿ: ಪಟ್ಟಣದಲ್ಲಿ ದೀಪಾವಳಿ ಲಕ್ಷ್ಮಿ ಪೂಜೆಗಾಗಿ ಮಾರುಕಟ್ಟೆಯಲ್ಲಿ ಚಂಡಿ ಹುವೂ, ಬಾಳೆಕಂದು, ಹಣ್ಣು ಕಾಯಿ, ಬ್ರಹ್ಮ ದಂಡಿ, ಕಾಚಿಕಡ್ಡಿ, ಮಾವಿನ ಸೊಪ್ಪು ಹೂವು ಹಣ್ಣು ಸಾರ್ವಜನಿಕರು ಭರಾಟೆಯಿಂದ ಖರೀದಿ ಮಾಡಿದರು.

ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಾಲೂಕಿನ ಮಾದನಬಾವಿ ರೈತರ ಜಮೀನುಗಳಿಗೆ ತೆರಳಿ ಬರಪೀಡಿತ ಸ್ಥಳವನ್ನು ವೀಕ್ಷಣೆ.

ನ್ಯಾಮತಿ: ತಾಲೂಕು ಮಾದನಬಾವಿ ಗ್ರಾಮದಲ್ಲಿ ಮಾಜಿ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಾಲೂಕಿನ ಮಾದನಬಾವಿ ರೈತರ ಜಮೀನುಗಳಿಗೆ ತೆರಳಿ ಬರಪೀಡಿತ ಸ್ಥಳವನ್ನು ವೀಕ್ಷಣೆ ಮಾಡಿ ಪರಿಶೀಲಿಸಿದರು.ಮಾಜಿ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ತಂಡ ಬರವೀಕ್ಷಣೆ ಮಾಡಿದ ನಂತರ ದಾನೇಹಳ್ಳಿ ಗ್ರಾಮದ…

ಬರಪೀಡಿತ ಜಮೀನಿಗಳಿಗೆ ತೆರಳಿ ಬರ ಅಧ್ಯಯನ ನೆಡೆಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ.

ನ್ಯಾಮತಿ : ರಾಜ್ಯದಲ್ಲಿ ಹಿಂದೆದು ಕಂಡು ಕೇಳರಿಯದಂತಹ ಬೀಕರ ಬರಗಾಲ ಎದುರಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ದಾವಿಸ ಬೇಕೆಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸರ್ಕಾರವನ್ನು ಆಗ್ರಹಿಸಿದರು.ಭಾರತೀಯ ಜನತಾ ಪಾರ್ಟಿ ಹೊನ್ನಾಳಿ…

You missed