ದಾವಣಗೆರೆ ಫೆ.25
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಮಾರ್ಚ್ 5, 6, ಮತ್ತು 7 ರಂದು ಮೂರು ದಿನಗಳ ಕಾಲ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹಿರೇಕಲ್ಮಠದಲ್ಲಿ ರಾಜ್ಯ ಮಟ್ಟದ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿದೆ.
ಈ ಕೃಷಿ ಮೇಳದಲ್ಲಿ ರೈತರು ದೇಶಿ ತಳಿ ಜಾನುವಾರು ಸಾಕಾಣಿಕೆ, ಕುರಿ/ಮೇಕೆ ಸಾಕಾಣಿಕೆ ಸುಧಾರಿತ ಪದ್ದತಿಗಳು, ಹಿತ್ತಲ ಕೋಳಿ ಸಾಕಾಣಿಕೆ ಮತ್ತು ಆಧುನಿಕ ಹೈನುಗಾರಕೆ ಪದ್ದತಿಗಳ ಬಗ್ಗೆ ಅರಿವು ಮೂಡಿಸಲು ಒಟ್ಟು ಆರು ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಮಳಿಗೆಗಳಲ್ಲಿ ಉತ್ತಮವಾಗಿ ಸಾಕಲಾಗಿರುವ ದೇಶಿ ತಳಿಯ ಜಾನುವಾರುಗಳನ್ನು ಪ್ರದರ್ಶಿಸಬಹುದಾಗಿದೆ.
ತಲಾ ಒಂದು ಜೊತೆ ಹಳ್ಳಿಕಾರ್ ಹೋರಿ/ ಎತ್ತುಗಳು/ಹಸುಗಳು, ಅಮೃತ್ ಮಹಲ್ ಹೋರಿ/ ಎತ್ತುಗಳು/ ಹಸುಗಳು, ಗಿರ್ ತಳಿ ಹಸುಗಳು, ಮುರ್ರಾ ಎಮ್ಮೆಗಳು ಹಾಗೂ ಒಂದು ಕುರಿ/ಮೇಕೆ ಘಟಕ, 10 ಕ್ಕೂ ಹೆಚ್ಚು ಗಿರಿರಾಜ/ ಅಸೀಲ್ ಕೋಳಿಗಳು ಹಾಗೂ ಒಂದು ಘಟಕ ಹೈಡ್ರೋಫೋನಿಕ್ಸ್/ಮೇವು ಕತ್ತರಿಸುವ ಯಂತ್ರಗಳನ್ನು ಮಳಿಗೆಗಳಲ್ಲಿ ಪ್ರದರ್ಶಿಸಬಹುದು.
ಆಸಕ್ತ ರೈತರು ದಾವಣಗೆರೆ ತಾಲ್ಲೂಕಿನ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ
ಡಾ. ಜಗದೀಶ್ ಪಿ.ವಿ 9448005250, ಚನ್ನಗಿರಿ ತಾಲ್ಲೂಕಿನ ಸಹಾಯಕ ನಿರ್ದೇಶಕ ಡಾ. ದೇವೇಂದ್ರಪ್ಪ ಆರ್ 9448571800, ಹರಿಹರ ತಾಲ್ಲೂಕಿನ ಸಹಾಯಕ ನಿರ್ದೇಶಕ ಡಾ. ನಂದಾ ಎಸ್.ಎಲ್ 8073900950, ಹೊನ್ನಾಳಿ ತಾಲ್ಲೂಕಿನ ಸಹಾಯಕ ನಿರ್ದೇಶಕ ಡಾ. ಬಾಬುರತ್ನ ವಿ 9448170225, ಜಗಳೂರು ತಾಲ್ಲೂಕಿನ ಸಹಾಯಕ ನಿರ್ದೇಶಕ ಡಾ. ಲಿಂಗರಾಜು. ಕೆ.ಬಿ 8088882755 ನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.