ಇವರುಗಳ ಜೊತೆಗೆ ABCNewsIndia.Net channelನ ಸಂಪಾದಕರಾದ ಅರವಿಂದ್ ಎಸ್ ರವರು ಅವರಿಗೆ ಆತ್ಮಸ್ಥೈರ್ಯ ವನ್ನು ತುಂಬುವುದರ ಮೂಲಕ ಪ್ರತಿಯೊಬ್ಬರು ಕೂಡ ದೈಹಿಕ ಆರೋಗ್ಯ ಹೆಚ್ಚಿಸಿಕೊಳ್ಳಲುವುದರ ಜೊತೆಗೆ ಮಾನಸಿಕ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೇಳುತ್ತಾ ಜನಗಳ ಹತ್ತಿರ ಹಣ ಇದಯೆ ಹೊರತು. ಆರೋಗ್ಯ ಇಲ್ಲ.
ಪ್ರತಿಯೊಬ್ಬರ ಮುಖದಲ್ಲಿ ಅಥವಾ ದೇಹದದಲ್ಲಿ ಆರೋಗ್ಯದ ಸಮಸ್ಯೆಗಳು 25 ರಿಂದ 40 ವರ್ಷದ ಯುವಕರಲ್ಲಿ ಎದ್ದು ಕಾಣುತ್ತಿರುವುದು ವಿಪರ್ಯಾಸದ ಸಂಗತಿ.
ಚಿಕ್ಕ ವಯಸ್ಸಿಗೆ ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ವೈಫಲ್ಯ, ಮತ್ತು ಕ್ಯಾನ್ಸರ್ ಸಮಸ್ಯೆಗಳಿಂದ ಬಳಲುತ್ತಿರುವುದು ನೋವಿನ ಸಂಗತಿಯಾಗಿದೆ .
ಆದ ಕಾರಣ ಪ್ರತಿಯೊಬ್ಬರು ಬೆವರು ಬರುವಹಾಗೆ ದೇಹವನ್ನು ದಂಡಿಸುವಂತಹ ಕೆಲಸವನ್ನ ಮಾಡಬೇಕು .
ಉದಾಹರಣೆಗೆ ಸೈಕಲ್ ಓಡಿಸುವುದು, ಬೆಳಗಿನ ಜಾವ ಸೂರ್ಯ ಉದಯವಾಗುವ ಮುಂಚೆ ಜೋರಾಗಿ ನಡೆಯುವುದು, ಓಡುವುದು, ಮತ್ತು ಯೋಗಾಸನವನ್ನು ಮಾಡುವುದು ಇಂತಹ ಕ್ರಿಯೇಗಳನ್ನ ಮಾಡಿದರೆ ಆರೋಗ್ಯ ಸಿಗಬಹುದು ಎಂದು ಹೇಳಿದರು.