ಜಂಟಿ ನಿರ್ದೇಶಕರಾದ ಆರ್ ಜೆ ಗೊಲ್ಲದರವರು ಮಾತನಾಡಿ ರಾಗಿ ಮತ್ತುಭತ್ತವನ್ನು ಬಿಟ್ಟು ಇನ್ನುಳಿದ ಎಲ್ಲಾ ಬೆಳೆಗಳಿಗೆ ಮಣ್ಣಿನ
ದಿಂಡನ್ನು ಮಾಡುವುದರಿಂದ ಇಳವರಿಯನ್ನು ಪಡೆಯುವಬಹುದು ಎಂದರು.ನಂತರ ಮಾತನಾಡಿ ರೈತರು ತಾವೇ ಸ್ವತಹ ಸಾವಯವ ಗೊಬ್ಬರವನ್ನು ತಯಾರಿಮಾಡಿಕೊಂಡು ತಮ್ಮ ಜಮೀನಿಗೆ ಹಾಕಿದರೆ ಸಮೃದ್ದವಾದ ಮತ್ತು ಫಲವತ್ತತೆ ಬೆಳೆಗಳನ್ನ ತಗೆಯಬಹುದು ಎಂದು ಹೇಳಿದರು.
ತರಳು ಬಾಳು ಕೃಷಿ ವಿಜ್ಞಾನಿಯಾದ ಡಾ// ಬಸವಗೌಡ ಮಾತನಾಡಿ ರೈತನು ತಮ್ಮದೇ ರೈತ ಉತ್ಫಾದನೆ ಕಂಪನಿಗಳನ್ನು ಮಾಡಬೇಕು ಈ ದೇಶದಲ್ಲಿ 3000ಕ್ಕೂ ಹೆಚ್ಚು ಉತ್ಪಾದನೆ ಕಂಪನಿಗಳು ಮಾಡಿದ್ದಾರೆ, ರಾಜ್ಯದಲ್ಲಿ 350 ರೈತರ ಕಂಪನಿಗಳನ್ನ ನಡೆಸುತಿದ್ದಾರೆ.
ಇನ್ನೂ 150 ಕಂಪನಿಗಳು ಪ್ರಾರಂಭಗೂಳ್ಳಲಿವೆ ಎಂದರು.ದಾವಣಗೆರೆ ಜಲ್ಲೆಯಲ್ಲಿ 6 ಕೃಷಿ ಉತ್ಫಾದನಾ ಕಂಪನಿಗಳು ಕೆಲಸ ಮಾಡುತ್ತಿವೆ. ಕೇಂದ್ರದ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ರವರು ಕೇಂದ್ರ ಸಂಸತ್ತನಲ್ಲಿ ಅನುಮೋದನೆಯಲ್ಲಿ 10.000 ರೈತರ ಉತ್ಫಾದನೆ
ಮಾಡುವ ಕಂಪನಿಗಳು ಪ್ರಾಂರಭಗೊಳ್ಳ ಬೇಕು ಎಂದು ಹೇಳಿದ್ದಾರೆ .ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಸಹ
ಮುಂಗಡ ಪತ್ರದಲ್ಲಿ ರೈತರರುಗಳಿಗೆ ಪ್ರತಿ ಒಂದು ವರ್ಷಕ್ಕೆ 100ಕ್ಕೂ ಹೆಚ್ಚು ಜನ ರೈತರು ಒಗ್ಗೂಡಿ ರೈತ ಉತ್ಫಾದನೆ ಕಂಪನಿಗಳು
ಸ್ಥಾಪನೆ ಮಾಡಬೇಕು ಹೇಳಿದ್ದಾರೆ ಎಂದು ಹೇಳಿದರು.
ಇವರುಗಳ ಉಪಸ್ಥಿತಿಯಲ್ಲಿ;- ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು, ಕೃಷಿ ವಿಜ್ಞಾನಿಗಳಾದ ಶ್ರೀ ಬಸವನಗೌಡ್ರು, ಜಂಟಿ ನಿದೇರ್ಶಕರಾದ ಆರ್. ಜಿ ಗೋಲ್ಲದ್ , ಕೊಣ್ಣಂದುರು ಸ್ವಾಮಿಗಳು, ಕೃಷಿ ರೈತ ಕುಂದೂರು ಹನುಮಂತಪ್ಪ, ಮಾಜಿ ಶಾಸಕರಾದ ಗಂಗಪ್ಪ,
ಮಲೇಶಪ್ಪ ಬಿಸೆರೊಟ್ಟಿ, ಡಾ// ಶರಣಪ್ಪ ಮುದಗಲ್ ಜಂಟಿ ನಿರ್ದೇಶಕರು, ಡಾ// ನವೀನ್ ಎನ್.ಇ ಬೇಸಾಯ ಶಾಸ್ತ್ರ ಮುಂತಾದವರು ಸಹ ಭಾಗಿಯಾಗಿದ್ದರು.