ದೆಹಲಿಯ ನಿಜಾಮುದ್ದಿನ್ ತಬ್ಲಿಕ್ ಜಮಾತಿನ ಪ್ರಾರ್ಥನೆಯಲ್ಲಿ ಪಾಲ್ಗೊಂಡವರಿಗೆ
ಕೊರೋನಾ ವೈರಸ್ ಹರಡಿರುವ ಶಂಕೆ ಬಗ್ಗೆ ಆರೋಗ್ಯ ಇಲಾಖೆಯಿಂದ ತಪಾಸಣೆ
ನಡೆಯುತ್ತಿದ್ದು, ಮುಸನ್ಮಾನ್ ಭಾಂಧವರು ಸ್ವ ಇಚ್ಛೆಯಿಂದ ಆರೋಗ್ಯ
ತಪಾಸಣೆ ಮಾಡಿಸಿಕೊಳ್ಳಬೇಕು. ಅಲ್ಲದೇ ಕೊರೋನಾ ವೈರಸ್ ತಡೆಗಟ್ಟಲು ಎಲ್ಲರೂ
ಸಹಕರಾರ ನೀಡಬೇಕು ಎಂದು ಹೇಳಿದ್ದಾರೆ.
ಪ್ರಾರ್ಥನೆಯಲ್ಲಿ ಪಾಲ್ಗೊಂಡ ಕೆಲವರು ತಪಾಸಣೆ ಮಾಡಿಸಿಕೊಂಡಿದ್ದಾರೆ.
ಕೆಲವರು ಸಹಕಾರ ನೀಡುತ್ತಿದ್ದು ಕೆಲವರು ಪತ್ತೆಯಾಗಿಲ್ಲ. ದಯಮಾಡಿ
ಮುಸ್ಲಿಂ ಬಾಂಧವರು ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕು. ಇದರಲ್ಲಿ
ಯಾವುದೇ ಪಕ್ಷಪಾತವಿಲ್ಲದೇ ದೇಶದ ಒಳಿತಗಾಗಿ ಎಲ್ಲರೂ ಒಗ್ಗಟ್ಟಗಾಬೇಕು.
ನಾಡಿನ ಹಿತಕ್ಕಾಗಿ ಎಲ್ಲರೂ ಹೋರಾಡಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಲ ಕಿಡಿಗೇಡಿಗಳು ಆರೋಗ್ಯ ಇಲಾಖೆ ಸಿಬ್ಬಂದಿಗಳ ಮೇಲೆ
ಹಲ್ಲೆ ನಡೆಸಿರುವುದು ಸರಿಯಲ್ಲ ಇದು ಖಂಡನೀಯ. ಯಾರೂ ಅಸಭ್ಯವಾಗಿ
ವರ್ತಿಸದೇ ಆರೋಗ್ಯ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಿ ಕೊರೋನಾ ವೈರಸ್
ತೊಲಗಲು ಮುಂದಾಗಬೇಕು. ನಾವೆಲ್ಲಾ ಸಮಾಜದ ಜೊತೆ ಇದ್ದು, ಸಮಾಜದ
ಆರೋಗ್ಯ ಕಾಪಾಡುವಲ್ಲಿ ಎಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದ್ದಾರೆ.
ದೇಶದ ಪ್ರಧಾನ ಮಂತ್ರಿ ಕರೆಗೆ ಎಲ್ಲರೂ ಕೈ ಜೋಡಿಸೋಣ, ಹಾಗೂ
ನಮ್ಮ ರಾಜ್ಯದ ಮುಖ್ಯಮಂತ್ರಿ ಹಗಲಿರುಳು ದುಡಿಯುತ್ತಿರುವ ಕರೋನಾ
ಮುಕ್ತ ಕರ್ನಾಟಕ ಮಾಡಲು ಹೊರಟಿರುವ ಮಂತ್ರಿ ಮಂಡಲ, ಶಾಸಕರು,
ಸಂಸದರು, ವೈದ್ಯರು, ಪೊಲೀಸ್ ಇಲಾಖೆ, ಟಿವಿ. ಮಾಧ್ಯಮದವರು,
ಪತ್ರಕರ್ತರು, ಪೌರಕಾರ್ಮಿಕರು ಇವರಿಗೆ ಸಹಕಾರ ನೀಡಬೇಕು. ಹಾಗೂ ಸಮಾಜ
ಭಾಂಧವರು ಮನೆಯಿಂದ ಹೊರ ಬಾರದೇ ಮನೆಯಲ್ಲಿಯೇ ಇದ್ದು ವೈರಸ್
ತಡೆಗಟ್ಟಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಬಾನುವಾರ (ಸೂರ್ಯ ಅಧಿಪತಿ) ಕುಜನ, ಮಿತ್ರ ಘಂರ್ಟಿ ಕುಜನ, ಸಂಖ್ಯೆ
ಮತ್ತು 9ನಿಮಿಷ, ಕುಜನ ಸಂಖ್ಯೆ ದೀಪ ಕುಜನ ತತ್ವ(ಅಗ್ನಿ ತತ್ವ) ಕುಜ ರಾಹುವಿನ
ಶತ್ರು, ರಾಹು ವೈರಸ್ ಅಧಿಪತಿ, ರಾಹುವನ್ನು ಓಡಿಸಲು ಕುಜನ ಅಸ್ತ್ರ.

Leave a Reply

Your email address will not be published. Required fields are marked *