ದಾವಣಗೆರೆ, ಏ.14
ಕೋವಿಡ್-19 ನಿಯಂತ್ರಣ ಹಿನ್ನಲೆಯಲ್ಲಿ ತೋಟಗಾರಿಕೆ
ಉತ್ಪನ್ನಗಳನ್ನು ಬೆಳೆದ ರೈತರುಗಳಿಗೆ ಸರಿಯಾದ
ಮಾರುಕಟ್ಟೆ ವ್ಯವಸ್ಥೆ, ಸರಬರಾಜು ವ್ಯವಸ್ಥೆ ಹಾಗೂ ಮಾಹಿತಿ
ಕೊರತೆಯಿಂದಾಗಿ ತೊಂದರೆ ಉಂಟಾಗಿದ್ದು , ಕಟಾವಿಗೆ
ಬಂದಿರುವ ಹಾಗೂ ಈಗಾಗಲೇ ಕಟಾವು ಮಾಡಿರುವ ವಿವಿಧ
ತರಕಾರಿ ಮತ್ತು ಹಣ್ಣುಗಳನ್ನು ಬೆಳೆದ ಜಿಲ್ಲೆಯ ರೈತರ
ನೆರವಿಗೆ ಸಹಾಯವಾಣಿಯನ್ನು ತೋಟಗಾರಿಕೆ ಇಲಾಖೆಯಿಂದ
ಪ್ರಾರಂಭಿಸಲಾಗಿದೆ.
ಸಹಾಯವಾಣಿ ಸಂಖ್ಯೆ: 08192-230049 ಕ್ಕೆ ಬೆಳಿಗ್ಗೆ 10 ಗಂಟೆ
ಯಿಂದ ಸಂಜೆ 06 ಗಂಟೆಯವರೆಗೆ ರೈತರು ಕರೆ ಮಾಡಿ
ಸೂಕ್ತ ಮಾರ್ಗದರ್ಶನ ಪಡೆಯಬಹುದೆಂದು ತೋಟಗಾರಿಕೆ
ಇಲಾಖೆಯ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನಾರ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *