ದಾವಣಗೆರೆ ಮೇ.05
ಮುಂಗಾರು ಹಂಗಾಮಿಗೆ ಅತಿ ಪ್ರಮುಖವಾದ ಕೃಷಿ ಪರಿಕರ,
ಬಿತ್ತನೆ ಬೀಜವನ್ನು ಕೃಷಿ ಇಲಾಖೆಯಿಂದ ರಿಯಾಯತಿ ದರದಲ್ಲಿ
ವಿತರಿಸಲು ಜಿಲ್ಲೆಯಲ್ಲಿರುವ 20 ರೈತ ಸಂಪರ್ಕ ಕೇಂದ್ರಗಳು
ಮೂಲಕ ಸಿದ್ಧತೆ ಮಾಡಿಕೊಳ್ಳಲಾಗಿದೆ.
2020-21 ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು
2.43 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು
ಹವಾಮಾನ ಇಲಾಖೆಯಿಂದ ಉತ್ತಮ ಮಳೆಯಾಗುವ
ಮುನ್ಸೂಚನೆ ನೀಡಲಾಗಿದ್ದು ಇಲಾಖೆಯಿಂದ ಬಿತ್ತನೆ ಬೀಜ,
ರಸಗೊಬ್ಬರ, ಕೀಟನಾಶಕಗಳಿಗೆ ಯಾವುದೇ
ಕೊರತೆಯಾಗದಂತೆ ವಿತರಣೆಗೆ ಸಿದ್ಧತೆ
ಮಾಡಿಕೊಳ್ಳಲಾಗುತ್ತಿದೆÉ.
ಇಲಾಖೆಯಿಂದ ವಿತರಿಸಲಾಗುವ ಪ್ರಮಾಣಿತ ಬಿತ್ತನೆ
ಬೀಜಗಳನ್ನು ಬೀಜ ಬದಲಿಕೆ ಅನುಪಾತದನ್ವಯ
ವಿತರಿಸಲಾಗುತ್ತದೆ ಹಾಗೂ ಬಿತ್ತನೆ ಬೀಜಗಳನ್ನು ವಿತರಿಸುವಾಗ
ಸ್ವಪರಾಗ ಸ್ಪರ್ಶ ಬೆಳೆಗಳಾದ ಶೇಂಗಾ, ತೊಗರಿ, ಉದ್ದು,
ಹೆಸರು, ಕಡಲೆ ಬಿತ್ತನೆ ಬೀಜಗಳನ್ನು ಒಮ್ಮೆ ಇಲಾಖೆಯಿಂದ
ಪಡೆದ ರೈತರು ಮುಂದಿನ ಮೂರು ವರ್ಷಗಳ ಬಳಿಕ ಅದೇ
ಬೆಳೆ, ತಳಿ ಬಿತ್ತನೆ ಬೀಜಗಳನ್ನು ಪಡೆಯಲು
ಅರ್ಹರಾಗಿರುತ್ತಾರೆ.
ಈ ಬೆಳೆಗಳಲ್ಲಿ ರೈತರು ತಾವು ಹಿಂದಿನ ವರ್ಷಗಳಲ್ಲಿ ಖರೀದಿಸಿ
ಬಿತ್ತನೆ ಮಾಡಿ ಬೆಳೆದಂತಹ ಬೆಳೆಯ ಬೀಜಗಳನ್ನು ಮುಂದಿನ
ಮೂರು ವರ್ಷಗಳವರೆಗು ಬಿತ್ತನೆ ಬೀಜಗಳಾಗಿ ಬಳಕೆ
ಮಾಡಬಹುದಾಗಿದೆ. 2020ನೇ ಮುಂಗಾರು ಹಂಗಾಮಿಗೆ
ಇಲಾಖೆಯಿಂದ ನೀಡಲಾದ ಮಾರ್ಗಸೂಚಿ ಪ್ರಕಾರ
ಸ್ವಪರಾಗಸ್ಪರ್ಶ ಬೆಳೆಗಳಲ್ಲಿ ಈ ಹಿಂದಿನ ಮೂರು ವರ್ಷಗಳಲ್ಲಿ
ಬಿತ್ತನೆ ಬೀಜ ಪಡೆದ ರೈತರಿಗೆ ಅದೇ ಬೆಳೆ, ತಳಿಗಳ
ಬೀಜಗಳನ್ನು ವಿತರಿಸಲಾಗುವುದಿಲ್ಲ.
ಕಳೆದ ಮೂರು ವರ್ಷಗಳಿಂದ ರಿಯಾಯತಿ ದರದಲ್ಲಿ
ಇಲಾಖೆಯಿಂದ ಖರೀದಿಸಿದ ಬಿತ್ತನೆ ಬೀಜದ ಫಲಾನುಭವಿ ರೈತರ
ವಿವರಗಳು ಇಲಾಖೆಯಲ್ಲಿ ಲಭ್ಯವಿರುತ್ತದೆ. ರೈತರಿಗೆ 10
ವರ್ಷಗಳಿಂದೀಚೆಗೆ ಬಿಡುಗಡೆಯಾದ ಉತ್ತಮ ಬೆಳೆ ಮತ್ತು
ತಳಿಯ ಬೀಜಗಳನ್ನು ವಿತರಿಸಿದ್ದು ತಾವು ಬೆಳೆದ ಬೆಳೆಯ
ಬೀಜಗಳನ್ನು ಬಿತ್ತನೆಗಾಗಿ ಬಳಸಬಹುದಾಗಿರುತ್ತದೆ. ರೈತರು
ಈ ತಾಂತ್ರಿಕತೆಯನ್ನು ಬಳಸಿಕೊಂಡು ಬಿತ್ತನೆ
ಮಾಡಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
