ದಾವಣಗೆರೆ ಮೇ.5

ಜಿಲ್ಲೆಯಲ್ಲಿ ಮೇ.4 ರಂದು 1.0 ಮಿ.ಮೀ ಸರಾಸರಿ
ಮಳೆಯಾಗಿದ್ದು, ತಾಲ್ಲೂಕುವಾರು ಮಳೆ ವಿವರ ಹಾಗೂ
ಅಂದಾಜು ಹಾನಿಯ ವಿವರ ಕೆಳಕಂಡಂತಿದೆ.
ಮಳೆಯ ವಿವರ: ಚನ್ನಗಿರಿಯಲ್ಲಿ 1.0 ಮಿ.ಮೀ ವಾಡಿಕೆಗೆ 2.0 ಮಿ.ಮೀ
ವಾಸ್ತವ ಮಳೆಯಾಗಿದೆ. ಹೊನ್ನಾಳಿ 2.0 ಮಿ.ಮೀ ವಾಡಿಕೆಗೆ 3.0 ಮಿ.ಮೀ
ವಾಸ್ತವ ಮಳೆಯಾಗಿದೆ. ಜಗಳೂರು 1.0 ಮಿ.ಮೀ ವಾಡಿಕೆಗೆ 2.0
ಮಿ.ಮೀ ವಾಸ್ತವ ಮಳೆಯಾಗಿದ್ದು ಜಿಲ್ಲೆಯಲ್ಲಿ ಸರಾಸರಿ ಒಟ್ಟು 1.0
ಮಿ.ಮೀ ಮಳೆಯಾಗಿದೆ.
ಜಿಲ್ಲೆಯಲ್ಲಿ ಒಟ್ಟಾರೆ ಅಂದಾಜು ರೂ. 10.80 ಲಕ್ಷ ನಷ್ಟ
ಸಂಭವಿಸಿದೆ. ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ ಫಾರಂ ಹೌಸ್‍ಗಳು
ಸಂಪೂರ್ಣ ಹಾನಿಗೊಂಡಿದ್ದು, ಅಂದಾಜು ರೂ. 10 ಲಕ್ಷ ನಷ್ಟ
ಸಂಭವಿಸಿದೆ. ಜೊತೆಗೆ 3.10 ಎಕರೆ ಅಡಿಕೆ ಬೆಳೆ ಹಾನಿಯಾಗಿದ್ದು, 80
ಸಾವಿರ ನಷ್ಟ ಸಂಭವಿಸಿದೆ.
ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ
ವಿತರಿಸಲು ಕ್ರಮ ವಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *