ದಾವಣಗೆರೆ ಜೂ.06
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ
ಹಿನ್ನಲೆ ಮಾರ್ಚ್‍ನಲ್ಲಿ ನಡೆಯಬೇಕಿದ್ದ ಎಸ್.ಎಸ್.ಎಲ್.ಸಿ
ಪರೀಕ್ಷೆಗಳನ್ನು ಸರ್ಕಾರ ಜೂ 25 ರಿಂದ ಜುಲೈ 4 ರವರೆಗೆ
ನಡೆಸಲು ತಿರ್ಮಾನಿಸಿದ್ದು, ಈ ಬಗ್ಗೆ ಮಕ್ಕಳಲ್ಲಿ ಹಾಗೂ
ಪೋಷಕರಲ್ಲಿ ಗೊಂದಲ, ಆತಂಕ ಇರುವುದರಿಂದ ಎಲ್ಲಾ ಆತಂಕ
ಗೊಂದಲಗಳನ್ನು ನಿವಾರಿಸಿಕೊಳ್ಳಲು ಕಚೇರಿ ಹಂತದಲ್ಲಿ
ಸಹಾಯವಾಣಿ ತೆರೆಯಲಾಗಿದೆ.
ಈ ಸಹಾಯವಾಣಿಯು ಜೂ.4 ರಿಂದ ಪರೀಕ್ಷೆ
ಪ್ರಾರಂಭವಾಗುವವರೆಗೆ ಕಾರ್ಯನಿರ್ವಹಿಸುತ್ತದೆ. ಬೆಳಿಗ್ಗೆ 11
ರಿಂದ ಸಂಜೆ 5 ಗಂಟೆಯವರೆಗೆ ಉಪನಿರ್ದೇಶಕರ ಕಚೇರಿ
ಸಂಖ್ಯೆ; 08192-23107 ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ
ಸಂಖ್ಯೆ; 08192-242572 ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ
ಪೋಷಕರು ಹಾಗೂ ವಿದ್ಯಾರ್ಥಿಗಳು ತಮ್ಮೆಲ್ಲಾ
ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಕ್ಷೇತ್ರ
ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿದ್ದಾರೆ.
