ದಾವಣಗೆರೆ ಜೂ 6
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ
ಪರೀಕ್ಷೆಗಳ ತರಬೇತಿ ಕೇಂದ್ರವು ಕೆಎಎಸ್ ಹಾಗೂ ಇತರೆ
ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‍ಲೈನ್ ತರಬೇತಿ
ಆಯೋಜಿಸಿದ್ದು, ನಾಡಿನ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಚಾಲನೆ
ನೀಡುವರು.
ಜೂನ್ 9 ರ ಮಂಗಳವಾರ ಬೆಳಿಗ್ಗೆ 11 ಕ್ಕೆ ಬೆಂಗಳೂರಿನಿಂದಲೇ
ತರಬೇತಿ ಉದ್ಘಾಟಿಸಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಕುರಿತು
ರೈಲ್ವೇ ಐಜಿಪಿಯಾಗಿರುವ ಡಿ.ರೂಪಾ ಮೌದ್ಗಿಲ್ ಮುಖ್ಯ ಭಾಷಣ
ಮಾಡುವರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ
ಪ್ರೊ.ಎಸ್.ವಿದ್ಯಾಶಂಕರ್ ಅಧ್ಯಕ್ಷತೆ ವಹಿಸಲಿದ್ದು, ಪ್ರಾದೇಶಿಕ
ಅಪರ ಆಯುಕ್ತೆ ಕೆ.ಎಂ.ಗಾಯತ್ರಿ ಮುಖ್ಯ ಅತಿಥಿಗಳಾಗಿ
ಭಾಗಿಯಾಗುವರು. ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ
ಉಪಸ್ಥಿತರಿರುವರು ಎಂದು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ

ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ
ತಿಳಿಸಿದ್ದಾರೆ.
2011 ರಲ್ಲಿ ಆರಂಭಗೊಂಡ ಕರ್ನಾಟಕ ರಾಜ್ಯ ಮುಕ್ತ
ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ಕೆಂದ್ರ ಹಲವು
ತರಬೇತಿಗಳನ್ನು ಆಯೋಜಿಸುತ್ತಾ ಬಂದಿದೆ. ಅದರಲ್ಲಿ ಯುಪಿಎಸ್‍ಸಿ
ಹಾಗೂ ಕೆಪಿಎಸ್‍ಸಿ ಪರೀಕ್ಷೆಗಳ ತರಬೇತಿಯೂ ಸೇರಿದೆ. ಕೊರೊನಾ
ಕಾರಣದಿಂದ ಆನ್‍ಲೈನ್ ತರಬೇತಿಯನ್ನು ಆಯೋಜಿಸಲಾಗಿದ್ದು,
ಕೆಸೆಟ್ ಪರೀಕ್ಷೆಗೆ ಕಳೆದ ವಾರ ತರಬೇತಿ ಮುಗಿದಿದೆ ಎಂದು
ತಿಳಿಸಿದ್ದಾರ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ : 0821 2515944
ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *