ದಾವಣಗೆರೆ ಜೂ.29
2020-21 ನೇ ಸಾಲಿನ ಮರುವಿನ್ಯಾಸಗೊಳಿಸಲಾದ ಹವಾಮಾನ
ಆಧಾರಿತ ಬೆಳೆ ವಿಮೆ ಯೋಜನೆಯಡಿ (ಖWಃಅIS) ಮುಂಗಾರು
ಮತ್ತು ಹಿಂಗಾರು ಅವಧಿಗಳಿಗೆ ವಿಮೆ ಕಟ್ಟಲು ಜುಲೈ 10 ರವರೆಗೆ
ಅವಧಿ ವಿಸ್ತರಿಸಲಾಗಿದೆ.
ಈ ಹಿಂದೆ ಬೆಳೆ ವಿಮೆ ಕಟ್ಟಲು ಜೂನ್ 30 ಕಡೆಯ ದಿನವೆಂದು
ನಿಗದಿಪಡಿಸಲಾಗಿದ್ದು, ಇದೀಗ ಈ ಅವಧಿಯನ್ನು ಜು.10 ರವರೆಗೆ
ವಿಸ್ತರಿಸಲಾಗಿದೆ. ದಾವಣಗೆರೆ ಜಿಲ್ಲೆಯ ತಾಲ್ಲೂಕುಗಳಲ್ಲಿನ
ಪ್ರಮುಖ ತೋಟಗಾರಿಕೆ ಬೆಳೆಗಳಾದ ಅಡಿಕೆ, ಮಾವು, ದಾಳಿಂಬೆ,
ವೀಳ್ಯದೆಲೆ ಮತ್ತು ಕಾಳು ಮೆಣಸು ಬೆಳೆಗಳಿಗೆ ವಿಮಾ ಯೋಜನೆ
ಜಾರಿಗೊಳಿಸಲಾಗಿದೆ.
ರೈತರು ತಮ್ಮ ಹತ್ತಿರದ ಬ್ಯಾಂಕ್‍ಗಳಲ್ಲಿ ಹಾಗು ಸಾಮಾನ್ಯ
ಸೇವಾ ಕೇಂದ್ರಗಳಲ್ಲಿ ವಿಮೆ ಕಟ್ಟಲು ಅವಕಾಶವಿರುತ್ತದೆ. ಹೆಚ್ಚಿನ
ಮಾಹಿತಿಗಾಗಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ
ನಿರ್ದೇಶಕರು ಅಥವಾ ಸಂಬಂಧಪಟ್ಟ ಹೋಬಳಿ ಅಧಿಕಾರಿಗಳನ್ನು
ಸಂರ್ಪಕಿಸಬೇಕೆಂದು ತೋಟಗಾರಿಕೆ ಉಪನಿರ್ದೇಶಕರಾದ
ಲಕ್ಷ್ಮೀಕಾಂತ್ ಬೊಮ್ಮನ್ನಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.