ದಾವಣಗೆರೆ ಜಿಲ್ಲೆ ಜು 2 ಹೊನ್ನಾಳಿ ಪಟ್ಟಣದ ಕನಕದಾಸ ರಂಗಮಂದಿರದಲ್ಲಿ ಇಂದು ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಡಿ.ಕೆ ಶಿವಕುಮಾರ್ ಮತ್ತು ಕಾರ್ಯಧ್ಯಕ್ಷರುಗಳಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಸತೀಶ್ ಜಾರಕಿಹೊಳಿ ಈ ನಾಲ್ಕು ಜನರ ಪ್ರತಿಜ್ಞಾ ಕಾರ್ಯಕ್ರಮದ ನೇರಪ್ರಸಾರವನ್ನು ಜೂಮ್ ಆಪ್ ಮೂಲಕ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆಯನ್ನು ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರು ಉದ್ಗಾಟಿಸಿದರು. ನಂತರ ಜೂಮ್ ಆಪ್ ಮೂಲಕ ಬೆಳೆಗಿನಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆದ ಕಾರ್ಯಕ್ರಮದ ವಿಧಿ ವಿಧಾನ ಕಾರ್ಯಕ್ರಮನ್ನು ಕಾಂಗ್ರೆಸ್ ಮುಖಂಡರು ಮತ್ತು ಯುವ ಕಾರ್ಯಕರ್ತರುಗಳ ಜೊತೆಗೂಡಿ ಎಲ್ಲಾ ಕಾರ್ಯಕ್ರಮವನ್ನು ನೋಡುವುದರ ಮೂಖಾಂತರ ಬೆಂಗಳೂರುನಲ್ಲಿ ನಡೆದ ಕಾರ್ಯಕ್ರಮವನ್ನ ಕೆಲವೊಂದು ವಿಧಿ
ವಿಧಾನವನ್ನು ಹೊನ್ನಾಳಿಯಲ್ಲಿ ಸಹ ಅನುಕರಣೆ ಮಾಡಲಾಯಿತು.
ಈ ಕಾರ್ಯಕ್ರಮದ ಉಪಸ್ಥಿತಿಯಲ್ಲಿ;- ಡಿ.ಜಿ ಶಾಂತನಗೌಡ್ರು ಮಾಜಿ ಶಾಸಕರು, ವೀಕ್ಷಕರಾದ ರವಿಕುಮಾರ್, ಕಾಂಗ್ರೆಸ್ ಅಧ್ಯಕ್ಷರಾದ ಸಣ್ಣಕ್ಕಿ ಬಸವನಗೌಡ್ರು,ಡಾ// ಈಶ್ವರ್ ನಾಯ್ಕ್, ಹೆಚ್.ಎ ಉಮಾಪತಿ, ಸಿದ್ದಪ್ಪ, ಮುಂತಾದ ಕಾಂಗ್ರೆಸ್ ಮುಖಂಡರುಗಳು ಮತ್ತು ಕಾರ್ಯಕರ್ತರುಗಳು
ಹಾಗೂ ಯುವ ಕಾರ್ಯಕರ್ತರುಗಳಾದ ಸ್ವರೂಪ್, ಪ್ರವೀಣ್, ಬಾಹುಬಲಿ, ದೇವರಾಜ್ ಸಹ ಭಾಗಿಯಾಗಿ ಯಶಸ್ವಿಗೊಳಿಸಿದರು.