ದಾವಣಗೆರೆ ಜು.02
ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ದಿ ಸಚಿವರಾದ ಬಿ.ಎ ಬಸವರಾಜ
ಇವರು ಜು.04 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಅಂದು ಬೆಳಿಗ್ಗೆ 11.20 ಕ್ಕೆ ಹಾವೇರಿಯಿಂದ ಹೊರಟು ಮಧ್ಯಾಹ್ನ 12.20
ಕ್ಕೆ ದಾವಣಗೆರೆ ಆಗಮಿಸಿ, ನಂತರ 12.30 ಕ್ಕೆ ಜಿಲ್ಲಾ ಚಿಗಟೇರಿ ಆಸ್ಪತ್ರೆ
ಆವರಣದಲ್ಲಿ ಮಕ್ಕಳ ಮತ್ತು ಮಹಿಳೆಯರ 100 ಹಾಸಿಗೆಗಳ
ಆಸ್ಪತ್ರೆಯ ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 2 ಗಂಟೆಗೆ
ದಾವಣಗೆರೆಯಿಂದ ಹೊರಟು 12 ಗಂಟೆಗೆ ಚಿತ್ರದುರ್ಗ
ತಲುಪುವರು ಎಂದು ಪ್ರಕಟಣೆ ತಿಳಿಸಿದೆ.