ದಾವಣಗೆರೆ ಜು.02
  ಕೋವಿಡ್-19 ವೈರಾಣು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ
ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ
ಆದೇಶದಂತೆ ಮೋಟಾರು ವಾಹನ ಕಾಯ್ದೆ 1988 ಮತ್ತು
ಕೇಂದ್ರ ಮೋಟಾರು ವಾಹನ ನಿಯಮಾವಳಿ 1989 ಇವುಗಳಿಗೆ
ಸಂಬಂಧಿಸಿದಂತೆ ದಿನಾಂಕ: 01-02-2020 ರ ನಂತರ ಅವಧಿ
ಮುಕ್ತಾಯಗೊಳ್ಳುವ ವಾಯಿದೆಯನ್ನು ಸಿಂಧುತ್ವ ಹೊಂದಿದ
ಅವಧಿ ಎಂದು ಪರಿಗಣಿಸಿ ದಿ: 30-09-2020 ರವರೆಗೆ
ವಿಸ್ತರಿಸಲಾಗಿರುತ್ತದೆ. (ಅರ್ಹತಾ ನವೀಕರಣ, ಪರಾವನಿಗೆ, ಎಲ್.ಎಲ್,
ಡಿ.ಎಲ್, ನೋಂದಣಿ ವಾಹನಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು
ಇತರೆ)
   ಆದ ಕಾರಣ ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು
ತಮ್ಮ ಕೆಲಸಗಳಿಗೆ ಆಗಮಿಸುತ್ತಿದ್ದಾರೆ. ಡಿ.ಎಲ್ ನವೀಕರಣ
ಮತ್ತು ಡಿ.ಎಲ್ ಗೆ ಸಂಬಂಧಿಸಿದ ಇತರೆ ಕೆಲಸಗಳಿಗೆ ಸಂಬಂಧಿಸಿದಂತೆ
ಡಿಜಿಟಲ್ ಸಹಿ ಮತ್ತು ಬಯೋಮೆಟ್ರಿಕ್ ಇರುವುದರಿಂದ

ಸುರಕ್ಷತೆಯ ದೃಷ್ಟಿಯಿಂದ 60 ವರ್ಷ ಮೇಲ್ಪಟ್ಟ ಹಿರಿಯ
ನಾಗರೀಕರು ಡಿ.ಎಲ್ ಹಾಗೂ ಇತರೆ ಸೇವೆಗಳಿಗೆ ಹಾಜರಾಗದಂತೆ
ತಿಳಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಜಿ.ಎಸ್.ಹೆಗಡೆ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *