ದಾವಣಗೆರೆ ಜು.03 
    ಜಿಲ್ಲೆಯಲ್ಲಿ ಇಂದು ನಡೆದ ಎಸ್‍ಎಸ್‍ಎಲ್‍ಸಿ ತೃತಿಯಭಾಷೆ
ವಿಷಯದ ಪರೀಕ್ಷೆಗೆ ಒಟ್ಟು 21548 ವಿದ್ಯಾರ್ಥಿಗಳು
ನೋಂದಾಯಿಸಿಕೊಂಡಿದ್ದು, ಈ ಪೈಕಿ 20430 ವಿದ್ಯಾರ್ಥಿಗಳು
ಪರೀಕ್ಷೆಗೆ ಹಾಜರಾಗಿರುತ್ತಾರೆ. 1118 ವಿದ್ಯಾರ್ಥಿಗಳು ಗೈರು
ಹಾಜರಾಗಿರುತ್ತಾರೆ.
    ಕಂಟೈನ್‍ಮೆಂಟ್ ಝೋನ್‍ನಿಂದ 85 ವಿದ್ಯಾರ್ಥಿಗಳು ಬಂದು
ಪರೀಕ್ಷೆ ಬರೆದಿರುತ್ತಾರೆ. ಒಟ್ಟು 446 ಜನರು ಖಾಸಗಿ
ವಿದ್ಯಾರ್ಥಿಗಳು ಮೊದಲ ಬಾರಿಗೆ ಪರೀಕ್ಷೆಗೆ
ನೋಂದಾಯಿಸಿಕೊಂಡಿದ್ದು, ಇದರಲ್ಲಿ 357 ವಿದ್ಯಾರ್ಥಿಗಳು
ಪರೀಕ್ಷೆಗೆ ಹಾಜರಾಗಿರುತ್ತಾರೆ. 02 ಜನ ವಿದ್ಯಾರ್ಥಿಗಳು
ಅನಾರೋಗ್ಯ ಕಾರಣದಿಂದ ವಿಶೇಷ ಕೊಠಡಿಯಲ್ಲಿ ಪರೀಕ್ಷೆ
ಬರೆದಿರುತ್ತಾರೆ. 89 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆ.
392 ವಲಸೆ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು ಈ ಪೈಕಿ 388
ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 02 ವಿದ್ಯಾರ್ಥಿ  ಗೈರು
ಹಾಜರಾಗಿರುತ್ತಾರೆ. 191 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿದ್ದು
ಪರೀಕ್ಷೆಗೆ ಹಾಜರಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *