ದಾವಣಗೆರೆ ಜು.03
    ದಾವಣಗೆರೆ-ಹರಿಹರ ನಗಾರಾಭಿವೃದ್ದಿ ಪ್ರಾಧಿಕಾರದ ವತಿಯಿಂದ,
ಶುಕ್ರವಾರ ಬೆಳಿಗ್ಗೆ ದಾವಣಗೆರೆÀ ಬೀರೂರು ಸಮ್ಮಸಗಿ
ರಸ್ತೆಯಲ್ಲಿ ವಿವಿಧ ಕಾಮಗಾರಿಗಳಿಗೆ  ಸಂಸದ ಜಿ.ಎಂ ಸಿದ್ದೇಶ್ವರ
ಹಾಗೂ ಶಾಸಕರಾದ ಎಸ್.ಎ.ರವೀಂದ್ರನಾಥ್ ಇವರು ಗುದ್ದಲಿ ಪೂಜೆ
ನೇರವೇರಿಸಿದರು.
   ದೂಡಾ ಆಯುಕ್ತರಾದ ಬಿ.ಟಿ ಕುಮಾರಸ್ವಾಮಿ ಮಾತನಾಡಿ,
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ  ಪಿ.ಬಿ ರಸ್ತೆ, ಬೀರೂರು
ಸಮ್ಮಸಗಿ ರಸ್ತೆಯ ಉಳಿದ ಪ್ರದೇಶದ  ಮಿಡಿಯಾದಲ್ಲಿ ಹಾಲಿ ಬೆಡ್

ಹಾಕಿರುವ ಸ್ಥಳದಲ್ಲಿ ರೂ.49 ಲಕ್ಷ ವೆಚ್ಚದಲ್ಲಿ ಹೊಸದಾಗಿ
ಅಲಂಕಾರಿಕ ಕಂಬಗಳನ್ನು, ಹಾಗೂ 40   ಎಲ್.ಇ.ಡಿ ಬೀದಿ
ದೀಪಗಳನ್ನು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ  ಜಿ.ಎಂ.ಐ.ಟಿ
ಕಾಲೇಜ್ ಮುಂಭಾಗದವರೆಗೂ ಅಳವಡಿಸಲಾಗುವುದು ಎಂದು
ಹೇಳಿದರು.
   ಕಾರ್ಯಕ್ರಮದಲ್ಲಿ ಶಾಸಕರಾದ ಪ್ರೊ. ಲಿಂಗಣ್ಣ,  ದೂಡಾ
ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಸದ್ಯಸ್ಯರಾದ
ದೇವಿರಮ್ಮ, ಸೌಭಾಗ್ಯ ಮುಕುಂದ, ಡಿ.ಬಿ ಜಯರುದ್ರಪ್ಪ,
ನಾಗರಾಜ್ ಎಂ,  ಕಾರ್ಯಪಾಲಕ ಅಭಿಯಂತರರಾದ ಶ್ರೀಕರ್,
ಅಭಿಯಂತರರಾದ  ಸುಜಯ್‍ಕುಮಾರ್ ಮತ್ತಿತರರು
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *