ದಾವಣಗೆರೆ ಜು.03
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ
ಆರೋಗ್ಯ ಅಭಿಯಾನ, ಕರ್ನಾಟಕ ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಇಂಜಿನಿಯರಿಂಗ್ ಘಟಕ ದಾವಣಗೆರೆ ಇವರ ವತಿಯಿಂದ ಜು.04
ರಂದು ಮಧ್ಯಾಹ್ನ 12.30ಕ್ಕೆ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ
100 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಕಟ್ಟದ ಶಂಕುಸ್ಥಾಪನಾ
ಸಮಾರಂಭದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ
ಸಚಿವರಾದ ಬಿ.ಎ ಬಸವರಾಜ ಶಂಕುಸ್ಥಾಪನೆಯನ್ನು
ನೆರೆವೇರಿಸುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸಚಿವರಾದ ಬಿ.ಶ್ರೀರಾಮುಲು ಘನ ಉಪಸ್ಥಿತಿರಾಗಿರುವರು. ಉತ್ತರ
ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ.ರವೀಂದ್ರನಾಥ್
ಅಧ್ಯಕ್ಷತೆ ವಹಿಸುವರು. ಮುಖ್ಯಮಂತ್ರಿಗಳ ರಾಜಕೀಯ
ಕಾರ್ಯದರ್ಶಿಗಳಾದ ಎಂ.ಪಿ.ರೇಣುಕಾಚಾರ್ಯ ಮತ್ತು
ಲೋಕಸಭಾ ಕ್ಷೇತ್ರದ ಸಂಸದರಾದ ಜಿ.ಎಂ.ಸಿದ್ದೇಶ್ವರ ಇವರು
ಗೌರವ ಉಪಸ್ಥಿತಿರಾಗಿರುವರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಅಧ್ಯಕ್ಷರು, ವಿಧಾನಸಭಾ ಮತ್ತು
ವಿಧಾನಪರಿಷತ್ ಶಾಸಕರು, ಮಹಾನಗರಪಾಲಿಕೆ ಮಹಾಪೌರರು,
ಹರಿಹರ-ದಾವಣಗೆರೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು
ಪಾಲ್ಗೋಳ್ಳುವರು. ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಮತ್ತು
ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಮತ್ತು ಆಯುಷ್ ಸೇವೆಗಳ ಆಯುಕ್ತರು, ರಾಷ್ಟ್ರೀಯ
ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕರು, ಜಿಲ್ಲಾಧಿಕಾರಿ,
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಇವರು ವಿಶೇಷ ಆಹ್ವಾನಿತರಾಗಿ ಆಗಮಿಸುವರೆಂದು ಪ್ರಕಟಣೆ
ತಿಳಿಸಿದೆ.