ದಾವಣಗೆರೆ ಜು.04

 ಶನಿವಾರ ನಗರದಲ್ಲಿ ಸ್ಮಾರ್ಟ್ ಸಿಟಿಯ ವಿವಿಧ ಕಾಮಗಾರಿಗಳಿಗೆ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಶಂಕುಸ್ಥಾಪನೆ ನೆರವೇರಿಸಿದರು

ನಗರದ ಯುಬಿಡಿಟಿ ಕಾಲೇಜಿನಲ್ಲಿ ರೂ. 3.9 ಕೋಟಿ ವೆಚ್ಚದಲ್ಲಿ ರಿಸರ್ಚ್ ಆಂಡ್ ಡೆವೆಲಪ್‍ಮೆಂಟ್ ಕಟ್ಟಡ, ರೂ. 1.28 ಕೋಟಿ ವೆಚ್ಚದಲ್ಲಿ ಟೆನಿಸ್ ಕ್ರೀಡಾಂಗಣ ಪುನಶ್ಚೇತನ, 2.62 ಕೋಟಿ ವೆಚ್ಚದಲ್ಲಿ ಮತ್ತಿಕಾಳ ಮತ್ತು ಬೇತೂರು ಹಳ್ಳದವರೆಗೆ ಹಾಗೂ 2.67 ಕೋಟಿ ವೆಚ್ಚದಲ್ಲಿ ಎಬಿಡಿ ಅಡಿಯಲ್ಲಿ ಒಳಚರಂಡಿ ಕಾಮಗಾರಿ ಸೇರಿದಂತೆ ರೂ. 4.14 ಕೋಟಿ ವೆಚ್ಚದಲ್ಲಿ ಅರಣೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.

 ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ರವೀಂದ್ರನಾಥ್, ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್‍ಪಿ ಹನುಮಂತರಾಯ, ಸಿಇಓ ಪದ್ಮಾ ಬಸವಂತಪ್ಪ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪೂರ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *