ದಾವಣಗೆರೆ ಜು.04
2020-21 ನೇ ಸಾಲಿನ ಮುಂಗಾರು ಹಂಗಾಮಿಗೆ ತೋಟಗಾರಿಕೆ
ಬೆಳೆಗಳನ್ನು ಮರು ವಿನ್ಯಾಸಗೊಳಿಸಲಾದ ಹವಮಾನ ಆಧಾರಿತ
ಬೆಳೆ ವಿಮೆ ಯೋಜನೆಯಡಿ ದಾವಣಗೆರೆ ತಾಲ್ಲೂಕಿನ ರೈತರು ಅಡಿಕೆ,
ವೀಳ್ಯೆದೆಲೆ (ಕೊಯ್ಲು ಹಂತದ) ಮತ್ತು ದಾಳಿಂಬೆ ಬೆಳೆಗೆ
ನೋಂದಣಿ ಮಾಡಿಕೊಳ್ಳಲು ಜೂನ್ 30 ಕ್ಕೆ ಕೊನೆಯ
ದಿನಾಂಕವೆಂದು ನಿಗದಿಪಡಿಸಲಾಗಿದ್ದು ಇದೀಗ ಇಲಾಖೆಯ
ನಿರ್ದೇಶನಾಲಯದ ಪರಿಷ್ಕøತ ಆದೇಶದಂತೆ ಜುಲೈ 10 ರವರೆಗೆ
ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ.
ದಾವಣಗೆರೆ ತಾಲ್ಲೂಕಿನ ರೈತರು ತಮ್ಮ ಹತ್ತಿರದÀ ಬ್ಯಾಂಕ್
ಹಾಗೂ ಸೇವಾ ಕೇಂದ್ರಗಳಲ್ಲಿ ತಮ್ಮ ವಿಮಾ ಯೋಜನೆಯ ಹಣ
ಪಾವತಿಸಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ
ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.