ಗದಗ ಜು.5: ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿಂದು ಶಿವಶರಣ ಶ್ರೀ ಹಡಪದ ಅಪ್ಪಣರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಎಂ. ಅವರು ಶ್ರೀ ಹಡಪದ ಅಪ್ಪಣರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಗದಗ ಜಿಲ್ಲಾ ಹಡಪದ ಅಪ್ಪಣ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಮೋಹನ ಚಂದಪ್ಪನವರ, ಪ್ರಧಾನ ಕಾರ್ಯದರ್ಶಿ ಅಶೋಕ ಪ್ರಭು, ಉಪಾಧ್ಯಕ್ಷರುಗಳಾದ ಕಲ್ಲೇಶಪ್ಪ ಕಾಡಗುಂಟಿ, ಕಲ್ಲಪ್ಪ ಹಡಪದ, ಪುಟ್ಟರಾಜ ಹಡಪದ ಉಪಸ್ಥಿತರಿದ್ದರು.