ದಾವಣಗೆರೆ ಜು.06
ದಾವಣಗೆರೆ ನಗರದಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ
ರೋಗಿ ಸಂಖ್ಯೆ 1251, 1808, 1809, 1963, 1964, 3073, 3216, 4836, 5304,
5305, 8800 ರ ಪ್ರದೇಶವಾದ ಆನೆಕೊಂಡ ಕಂಟೈನ್‍ಮೆಂಟ್
ವಲಯಗಳೆಂದು ಘೋಷಿಸಿ ಕ್ರಮ ಕೈಗೊಳ್ಳಲಾಗಿತ್ತು.
ಇದೀಗ 14 ದಿನಗಳಿಂದ ಯಾವುದೇ ಹೊಸ ಕೊರೊನಾ ಪ್ರಕರಣ
ದಾಖಲಾಗದ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆ ಕಾಯ್ದೆ 2005 ರ
ಅಧಿಕೃತ ಜ್ಞಾಪನೆ ಅನ್ವಯ ಈ ಕಂಟೈನ್‍ಮೆಂಟ್ ವಲಯವನ್ನು
ಡಿನೋಟಿಫೈ ಮಾಡಲಾಗಿದೆ.
ಮೇ 21 ರಿಂದÀ ಕೋವಿಡ್ ಪಾಸಿಟಿವ್ ಆಗಿದ್ದ ಮೇಲ್ಕಂಡ ರೋಗಿಗಳು
ನೆಲೆಸಿದ್ದ ಆನೆಕೊಂಡ ಪ್ರದೇಶದ ರೋಗಿಯ ಮನೆಗಳ
ಮನೆಯ ಬೇತೂರು ರಸ್ತೆಗೆ ಕೂಡುವ ಬಸಾಪುರ ರಸ್ತೆ,
ಪಶ್ಚಿಮಕ್ಕೆ ಆರ್‍ಎಂಸಿ ರಸ್ತೆ, ಉತ್ತರಕ್ಕೆ ಬೇತೂರು ರಸ್ತೆ ಮತ್ತು
ದಕ್ಷಿಣಕ್ಕೆ ಮಟ್ಟಿಕಲ್ ರಸ್ತೆ
ಹಾಗೂ ಈ ಬಡಾವಣೆಯ ಎಲ್ಲೆಯಲ್ಲಿರುವ ಪೂರ್ವಕ್ಕೆ
ಆನೆಕೊಂಡ ಮುಖ್ಯ ರಸ್ತೆ ಮತ್ತು ಬಸವೇಶ್ವರ ದೇವಸ್ಥಾನ
ರಸ್ತೆ, ಪಶ್ಚಿಮಕ್ಕೆ ಇಮಾಮ್ ನಗರ &ಚಿmಠಿ; ಬಂಬೂ ಬಜಾರ್ ರಸ್ತೆ,
ಉತ್ತರಕ್ಕೆ ಬೇತೂರು ರಸ್ತೆ ಮತ್ತು ದಕ್ಷಿಣಕ್ಕೆ ಕಲ್ಲೇಶ್ವರ
ರೈಸ್ ಮಿಲ್ ರಸ್ತೆ, ಈ ವ್ಯಾಪ್ತಿಯಲ್ಲಿದ್ದ 72 ಮನೆಗಳು, 02
ಅಂಗಡಿಗಳು, 345 ಜನಸಂಖ್ಯೆ ಹಾಗೂ 200 ಮೀಟರ್ ಬಫರ್ ಝೋನ್
ಸೇರಿದಂತೆ ಈ ಕಂಟೈನ್‍ಮೆಂಟ್ ವಲಯವನ್ನು ನಿಯಮಾನುಸಾರ
ಡಿನೋಟಿಫೈ ಮಾಡಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.