ದಾವಣಗೆರೆ ಜು.06 
2020-21 ನೇ ಸಾಲಿನಲ್ಲಿ ಹಿರಿಯ ಸಹಾಯಕ ತೋಟಗಾರಿಕೆ
ನಿರ್ದೇಶಕರು, ಜಗಳೂರು ಈ ಕಚೇರಿಯಿಂದ ರಾಷ್ಟ್ರೀಯ
ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಬೆಳೆಗಳ ಪ್ರದೇಶ
ವಿಸ್ತರಣೆ, ಕೃಷಿ ಹೊಂಡ, ಸಮುದಾಯ ಕೃಷಿಹೊಂಡ, ಪ್ಯಾಕ್ ಹೌಸ್
ಘಟಕ, ಸಂಸ್ಕರಣಾ ಘಟಕಗಳನ್ನು ಹಾಗೂ ಇತರೆ
ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗಿದೆ.
ಆಸಕ್ತ ರೈತರು ಈ ಯೋಜನೆಯ ಸೌಲಭ್ಯ ಪಡೆಯಲು
ತೋಟಗಾರಿಕೆ ಇಲಾಖೆ ಜಗಳೂರು ಇಲ್ಲಿ ಅರ್ಜಿಯನ್ನು
ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜುಲೈ 20 ಕೊನೆಯ
ದಿನಾಂಕವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದ ಅಧಿಕಾರಿಗಳಾದ ಅನಂತ್
ಕುಮಾರ್ ಕೆ.ಪಿ (ರೈ.ಸಂ. ಕೇಂದ್ರ ಕಸಬಾ)  ಮೋ ಸಂ : 9900796617,
ಪ್ರಸನ್ನ  ಕುಮಾರ್ ಜಿ.ಎಚ್ (ರೈ.ಸಂ ಕೇಂದ್ರ ಬಿಳಿಚೋಡು) ಮೊ
ಸಂ: 7625078047, ಶಿವಣ್ಣ. ಜೆ (ರೈ.ಸಂ ಕೇಂದ್ರ ಸೊಕ್ಕೆ) ಮೋ ಸಂ:
6362315280 ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದೆಂದು
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
 

Leave a Reply

Your email address will not be published. Required fields are marked *