ದಾವಣಗೆರೆ ಜು.06
ಜಿಲ್ಲೆಯಲ್ಲಿ ನರ್ಸಿಂಗ್ ಹೋಂಗಳು, ಆಸ್ಪತ್ರೆಗಳು ಮತ್ತು
ಕ್ಲಿನಿಕ್‍ಳಿಂದ ಉತ್ಪಾದನೆಯಾಗುವ ಜೀವ ವೈದ್ಯಕೀಯ
ತ್ಯಾಜ್ಯವನ್ನು ಮೆ|| ಸುಶಾಂತ್ ಎನ್ವಿರಾಮೆಂಟಲ್ ಟೆಕ್ನಾಲಜೀಸ್,
ಅಮರಾವತಿ ಇವರ ಮುಖಾಂತರ ವಿಲೇವಾರಿ (ಅommoಟಿ ಃio-meಜiಛಿಚಿಟ Wಚಿsಣe
ಖಿಡಿeಚಿಣmeಟಿಣ ಜಿಚಿಛಿiಟiಣಥಿ) ಮಾಡಲಾಗಿರುತ್ತದೆ.
ಇತ್ತೀಚೆಗೆ ಪತ್ರಿಕೆಯಲ್ಲಿ ಬಂದ ವರದಿಯಂತೆ, ಹರಿಹರ-
ದಾವಣಗೆರೆ ಮಾರ್ಗದ ರಸ್ತೆ ಬದಿಯಲ್ಲಿ ಮರದ ಕೆಳಗೆ
ಆಸ್ಪತ್ರೆಗಳಲ್ಲಿ ಉಪಯೋಗಿಸಿದ ಜೀವ ವೈದ್ಯಕೀಯ
ತ್ಯಾಜ್ಯವನ್ನು ಸ್ವಚ್ಛ ಭಾರತ ಮುದ್ರಿತ ಸಿಮೆಂಟ್ ಚೀಲದಲ್ಲಿ ಕಟ್ಟಿ
ಎಸೆಯಲಾಗಿರುವ ಬಗ್ಗೆ ತಿಳಿದು ಜೂ.19 ರಂದು ಸ್ಥಳ ಪರಿವೀಕ್ಷಣೆ
ನಡೆಸಿ ಜೀವ ವೈದ್ಯಕೀಯ ತ್ಯಾಜ್ಯವನ್ನು ಮೆ|| ಸುಶಾಂತ್
ಎನ್ವಿರಾಮೆಂಟಲ್ ಟೆಕ್ನಾಲಜೀಸ್, ಅಮರಾವತಿ ಇವರ ಮುಖಾಂತರ
ವಿಲೇವಾರಿ ಮಾಡಲಾಗಿರುತ್ತದೆ.
ಕೋವಿಡ್-19 ವೈರಸ್ ಬಗ್ಗೆ ಜಾಗೃತಿಗೊಳ್ಳುವುದರ ಜೊತೆಗೆ
ಜೀವ ವೈದ್ಯಕೀಯ ತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ
ವಿಲೇವಾರಿ ಮಾಡಲು ಸಹಕರಿಸಬೇಕಾಗಿರುತ್ತದೆ. ಇನ್ನು ಮುಂದೆ
ದಾವಣಗೆರೆ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಕ್ಲಿನಿಕ್,
ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಿಂದ ಉತ್ಪತ್ತಿಯಾಗುವ
ಜೀವ ವೈದ್ಯಕೀಯ ತ್ಯಾಜ್ಯ ವಸ್ತುಗಳನ್ನು ವಿಲೇವಾರಿಗಾಗಿ
ಸಾಮೂಹಿಕ ಜೀವ ವ್ಯದ್ಯಕೀಯ ತ್ಯಾಜ್ಯ ವಸ್ತುಗಳ ಸಂಸ್ಕರಣಾ
ಘಟಕ (ಅommoಟಿ ಃio-meಜiಛಿಚಿಟ Wಚಿsಣe ಖಿಡಿeಚಿಣmeಟಿಣ ಜಿಚಿಛಿiಟiಣಥಿ) ವಾದÀ
ಮೆ||ಸುಶಾಂತ್ ಎನ್ವಿರಾಮೆಂಟಲ್ ಟೆಕ್ನಾಲಜೀಸ್, ಅಮರಾವತಿ ಇವರಿಗೆ
ನೀಡುವುದು ಕಡ್ಡಾಯವಾಗಿರುತ್ತದೆ.
ಜೀವ ವೈದ್ಯಕೀಯ ವಸ್ತುಗಳಾದ ಪ್ಲಾಸ್ಟಿಕ್, ಟ್ಯೂಬ್, ಕ್ಯಾಥಟರ್ಸ್,
ಗುಕ್ಲೋಸ್ ಬಾಟಲ್‍ಗಳನ್ನು ಗುಜರಿ ಅಂಗಡಿಗಳಿಗೆ ನೀಡಬಾರದಾಗಿ
ತಿಳಿಸಲಾಗಿಸದೆ. ತಪ್ಪಿದಲ್ಲಿ ಕ್ಲಿನಿಕ್/ಆಸ್ಪತ್ರೆ/ನರ್ಸಿಂಗ್ ಹೋಂ/ಗುಜರಿ
ಅಂಗಡಿಗಳ ವಿರುದ್ಧ ಜೀವ ವೈದ್ಯಕೀಯ ತ್ಯಾಜ್ಯ ವಸ್ತುಗಳ
ನಿಯಮಗಳು, ಪರಿಸರ ಸಂರಕ್ಷಣಾ ಕಾಯ್ದೆ, 1986 ರಡಿಯಲ್ಲಿ
ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು
ಸಾರ್ವಜನಿಕರು ಮನೆಗಳಲ್ಲಿ ಸ್ವಂತವಾಗಿ ಉಪಯೋಗಿಸುವ
ಸಿರೆಂಜ್ ಮತ್ತು ಇತರೆ ಔಷಧಿಗಳನ್ನು ಸಂಬಂಧಿಸಿದ
ಆಸ್ಪತ್ರೆಗಳಿಗೆ/ಮೆ.ಸುಶಾಂತ್ ಎನ್ವಿರಾಮೆಂಟಲ್ ಟೆಕ್ನಾಲಜೀಸ್, ಇವರಿಗೆ
ವಿಲೇವಾರಿ ನೀಡಬೇಕಾಗಿ ಸೂಚಿಸಲಾಗಿದೆ.
ಔಷಧಿ ನಿಯಂತ್ರಕರು ಇವರು ಜೀವ ವೈದ್ಯಕೀಯ ತ್ಯಾಜ್ಯ
ವಸ್ತುಗಳ ನಿಯಮಗಳ ಪ್ರಕಾರ ಜಿಲ್ಲೆಯಲ್ಲಿ ಬರುವ ಎಲ್ಲಾ
ಔಷಧಿ ಅಂಗಡಿಯವರು ಅವಧಿ ಮಿರಿದ ಔಷಧಿಗಳನ್ನು
ಸಂಬಂಧಿದ ಕಂಪನಿಗಳಿಗೆ ಹಿಂದಿರಿಗಿಸಲು ಕ್ರಮಕೈಳ್ಳುವಂತೆ
ತಿಳಿಸಲಾಗಿದೆ.
ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಕ್ಲಿನಿಕ್ ಆಸ್ಪತ್ರೆ
ಮತ್ತು ನರ್ಸಿಂಗ್ ಹೋಂಗಳಲ್ಲಿ ಉತ್ಪತ್ತಿಯಾಗುವ ಎಲ್ಲಾ
ರೀತಿಯ ಜೀವ ವೈದ್ಯಕೀಯ ತ್ಯಾಜ್ಯ ವಸ್ತುಗಳನ್ನು ವಿಂಗಡಿ
ಮೆ||ಸುಶಾಂತ್ ಎನ್ವಿರಾಮೆಂಟಲ್ ಟೆಕ್ನಾಲಜೀಸ್, ಅಮರಾವತಿ ಇವರಿಗೆ
ನೀಡುವಂತೆ ಈ ಮೂಲಕ ಸೂಚಿಸಲಾಗಿದೆ
ತಪ್ಪಿದಲ್ಲಿ ಸಂಬಂಧಿಸಿದ ಕ್ಲಿನಿಕ್, ಆಸ್ಪತ್ರೆ ಮತ್ತು ನರ್ಸಿಂಗ್
ಹೋಂಗಳ ವಿರುದ್ಧ ಜೀವ ವೈದ್ಯಕೀಯ ತಾಜ್ಯ ವಸ್ತುಗಳ
ನಿಯಮಗಳು, 2016 ಮತ್ತು ಪರಿಸರ ಸಂರಕ್ಷಣಾ ಕಾಯ್ದೆ
1986 ರಡಿಯಲ್ಲಿ ಕಾನೂನು ರೀತ್ಯಾ ಕ್ರಮಕೈಗೊಳ್ಳಲಾವುದು.
ಇನ್ನೂ ಮುಂದೆ ದಾವಣಗೆರೆ ಜಿಲ್ಲೆದ್ಯಾದಂತ ರಸ್ತೆಗಳ ಬದಿಯಲ್ಲಿ
ಖಾಲಿ ಜಾಗದಲ್ಲಿ ಜೀವ ವೈದ್ಯಕೀಯ ತ್ಯಾಜ್ಯ ವಸ್ತುಗಳನ್ನು
ಎಸೆದಿರುವುದನ್ನು ಕಂಡು ಬಂದರೆ ಕೂಡಲೆ ಮೆ|| ಸುಶಾಂತ್
ಎನ್ವಿರಾಮೆಂಟಲ್ ಟೆಕ್ನಾಲಜೀಸ್, ಅಧಿಕಾರಿ ಸಂತೋಷ 9964690358 ಇವರಿಗೆ
ತಿಳಿಸುವಂತೆ ಪರಿಸರ ಅಧಿಕಾರಿ ಕೆ.ಬಿ ಕೊಟ್ರೇಶ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ