ಹೊನ್ನಾಳಿಃ- ಆಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ
ಬೆಳೆ ಗಣನೀಯವಾಗಿ ಕುಸಿದಿದ್ದರೂ ಕೂಡ ದೇಶದಲ್ಲಿ
ಬಿಜೆಪಿ ಸರ್ಕಾರ ಪೆಟ್ರೋಲ್ ,ಡೀಸೆಲ್ ಬೆಲೆ ನಿರಂತರ ಏರಿಕೆ
ಮಾಡುತ್ತಲೇ ಬರುವ ಮೂಲಕ ಜನನಿರೋ„ ನೀತಿ
ಅನುಸರಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ
ಎಚ್.ಬಿ.ಮಂಜಪ್ಪ ಆರೋಪಿಸಿದರು
ಬುಧುವಾರ ತಾಲೂಕು ಕಾಂಗ್ರೇಸ್ ಪಕ್ಷದವತಿಯಿಂದ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ದ ಹಮ್ಮಿಕೊಂಡಿದ್ದ
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ 15 ದಿನಗಳ ಆವ„ಯಲ್ಲಿ ತೈಲ ಬೆಲೆ 11.39 ರು
ಏರಿಕೆಯಾಗಿದೆ ಈ ರೀತಿ ತೈಲ ಬೆಲೆ ಏರಿಕೆಯಿಂದಾಗಿ ಇದರ
ಪರಿಣಾಮ ರೈತರು, ವರ್ತಕರು, ಜನ ಸಾಮಾನ್ಯರ ಜೀವ
ಜೀವನದಲ್ಲಿ ಮೇಲೆ ಪರಿಣಾಮ ಬೀರಿ ಎಲ್ಲಾ ವಸ್ತುಗಳ ಬೆಲೆ
ಏರಿಕೆಯಿಂದಾಗಿ ಜನರಿಗೆ ಹೊರೆಯಾಗುತ್ತಿ ಒಂದು ರೀತಿಯ
ಸ್ಲೋ ಪಾಯಿಜನ್ ರೂಪದಲ್ಲಿ ಕೇಂದ್ರ ಸರ್ಕಾರ
ವರ್ತಿಸುತ್ತಿದೆ ಎಂದು ದೂರಿದರು.
ಮಾಜಿ ಶಾಸಕ ಡಿ.ಜಿ.ಶಾಂತನಗೌಡ್ರು ಮಾತನಾಡಿ, ಕೇಂದ್ರ
ಮತ್ತು ರಾಜ್ಯ ಸರ್ಕಾರಗಳಿಗೆ ಕೊರೋನಾ
ವರದಾನವಾದಂತಾಗಿದ್ದು ಸರ್ಕಾರದ ಜನವಿರೋ„
ನೀತಿಗಳ ವಿರುದ್ದ ಇತರೆ ಪಕ್ಷಗಳು ಪ್ರತಿಭಟನೆ
ಮಾಡಲು ಅನುಮತಿ ನೀರಾಕರಿಸುವುದುಅಥವಾ
ಮುಂದೂಡುವ ಕೆಲಸ ಮಾಡುತ್ತಿವೆ ಎಂದರು.
ಪೆಟ್ರೋಲ್,ಡೀಸೆಲ್ ಬೆಲೆಯನ್ನು ಸಾರ್ವಜನಿಕ
ಹಿತಾಸಕ್ತಿಯನ್ನು ಕಡೆಗಣಿಸಿ ಏರಿಕೆ ಮಾಡುತ್ತಿದ್ದರೂ
ಕೂಡ ಆಟೋ,ಟ್ಯಾಕ್ಸಿ,ಇತರೆ ವಾಹಗಳ ಮಾಲೀಕರು,
ಚಾಲಕರು, ರೈತರು ಜನ ಸಾಮಾನ್ಯರು ಖಂಡಿಸಿ ಪ್ರತಿಭಟನೆ
ನಡೆಸದಿರುವುದು ವಿಷಾದಕರ ಸಂಗತಿಯಾಗಿದೆ ಎಂದು
ಹೇಳಿದರು
ಕಾಂಗ್ರೇಸ್ ಹಿರಿಯ ನಾಯಕ ಬಿ.ಸಿದ್ದಪ್ಪ ಮಾತನಾಡಿ ಹಣ
ಲೂಟಿ ಮಾಡಲು ಕೊರೋನಾ ಪರಿಸ್ಥಿತಿ ಆಡಳಿತ ನಡೆಸುವ
ಸರ್ಕಾರಗಳಿಗೆ ವರದಾನವಾಗಿದೆ, ಇಂದು ರಾಜ್ಯದಲ್ಲಿ
ಕೊರೋನಾ ಸೋಂಕಿತರ ಸಂಖ್ಯೆ 7ಲಕ್ಷ ಗಡಿ ದಾಟುತ್ತಿದೆ
ಇದನ್ನು ನಿಯಂತ್ರಿಸುವಲ್ಲಿ ಸರ್ಕಾರಗಳು ವಿಪಲವಾಗಿದೆ
ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಜಿ.ವಿಶ್ವನಾಥ್,
ಸಾಸ್ವೇಹಳ್ಳಿ ಬ್ಲಾಕ್ ಅಧ್ಯಕ್ಷರಾದ ಎಚ್.ಎ.ಗದ್ದಿಗೇಶ್,
ಮಾತನಾಡಿದರು.
ಯುವ ಕಾಂಗ್ರೇಸ್ ಅಧ್ಯಕ್ಷರಾದ ಮಧುಗೌಡ, ಉಪಾಧ್ಯಕ್ಷರಾದ
ರಂಜೀತ್, ತಾ.ಪಂ.ಸದಸ್ಯ ಅಬೀದ್‍ಆಲಿ ಖಾನ್, ಕಾಂಗ್ರೇಸ್
ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷರಾದ ಎಚ್.ಎ.ಉಮಾಪತಿ,
ಮುಖಂಡರಾದ ಟಿ.ರಮೇಶ್,ಗಜೇಂದ್ರಪ್ಪ,
ಎಸ್.ಎಸ್.ಬೀರಪ್ಪ, ಎನ್.ಎನ್.ಯು.ಐ.ನ ಮನೋಜ್ ವಾಲಜ್ಜಿ,
ಪ.ಪಂ. ಸದಸ್ಯ ಎಂ. ಸುರೇಶ್ ಮುಂತಾದವರು ಇದ್ದರು.
ಪಟ್ಟಣದ ಟಿ.ಬಿ. ವೃತ್ತದಿಂದ ಮೆರವಣಿಗೆ ತಾಲೂಕು
ಕಚೇರಿಗೆ ಆಗಮಿಸಿದ ಕಾಂಗ್ರೇಸ್ ಮುಖಂಡರು,
ಕಾರ್ಯಕರ್ತರು ಉಪತಹಶೀಲ್ದಾರ್ ಶ್ರಿನಿವಾಸ್ ಅವರ
ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.