ದಾವಣಗೆರೆ ಜು.12
ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಉತ್ತಮ ಸ್ಥಿತಿಯಲ್ಲಿದ್ದು ಇದರೊಂದಿಗೆ ಸಾವಿನ ಪ್ರಮಾಣ ಕಡಿಮೆಯಾಗಲು ಮತಷ್ಟು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಮಾನ್ಯ ಮುಖ್ಯಮಂತ್ರಿಗಳ ವಿಡಿಯೊ ಸಂವಾದದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಛೇರಿ ಸಂಭಾಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಒಂದು ಅಂದಾಜಿನಂತೆ ನೂರು ಪಾಸಿಟಿವ್ ಪ್ರಕರಣಗಳಿಗೆ ಒಂದು ಸಾವು ಸಂಭವಿಸಬಹುದಾಗಿದ್ದು ನಮ್ಮಲ್ಲಿ ಆ ಪ್ರಮಾಣ ಸ್ವಲ್ಪ ಹೆಚ್ಚಿದೆ ಈ ಸಾವಿನ ಪ್ರಮಾಣ ತಗ್ಗಿಸಲು ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಅನುಸರಿಸುವ ಮೂಲಕ ಸಾವಿನ ಪ್ರಮಾಣ ತಗ್ಗಿಸಲು ಶ್ರಮಿಸಬೇಕಾಗಿದೆ ಎಂದರು.
ಈ ನಿಟ್ಟಿನಲ್ಲಿ ಕಂಟೈನ್‍ಮೆಂಟ್ ಜೋನ್, ಬಫರ್ ಜೋನ್, ಸೇರಿದಂತೆ ಉಳಿದ ಪ್ರದೇಶಗಳಲ್ಲಿ ಹೆಚ್ಚಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸುವ ಮೂಲಕ ಪಾಸಿಟಿವ್ ಇರುವವರನ್ನು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು. ಸೋಂಕು ಲಕ್ಷಣ ಇರುವವರು ತಡಮಾಡದೆ ಆಸ್ವತ್ರೆಗೆ ಬಂದರೆ ಅವರು ಎಂತಹದೆ ಕಠಿಣ ಪರಿಸ್ಥಿತಿಯಲ್ಲಿದ್ದರು ಶೀಘ್ರ ಗುಣಪಡಿಸಲು ನೆರವಾಗುತ್ತೆದೆ ಎಂದರು.
ಪ್ರತಿ ವಾರ್ಡಗಳಲ್ಲಿ ಟಾಸ್ಕ್‍ಫೋರ್ಸ್ ಸಮಿತಿಗಳನ್ನು ರಚಿಸಲಾಗಿದೆ ಅದರಲ್ಲಿ ಅಲ್ಲಿನ ಮುಖಂಡರು ಜನಪ್ರತಿನಿಧಿಗಳು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಿದರೆ ಯಶಸ್ಸು ಸಾಧ್ಯ ಸಂಭದಿಸಿದ ವಾರ್ಡ್‍ನ ಅಧಿಕಾರಿ ಇದೆಲ್ಲವನ್ನೂ ಸರಿಯಾಗಿ ಪಾಲೋ ಅಪ್ ಮಾಡಬೇಕು ಮತ್ತು ವಾರ್ಡ್ ಮಟ್ಟದಲ್ಲಿ ರಚಿಸಿರುವ ಸಮಿತಿಯಲ್ಲಿರುವ ಎಲ್ಲಾ ಸದ್ಯಸ್ಯರಿಗೆ ಸರಿಯಾದ ತರಬೇತಿ ನೀಡಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಡಬೇಕೆಂದರು.
ನಗರ ಕೇಂದ್ರದಲ್ಲಿ ಕೇಂದ್ರೀಕೃತವಾಗಿದ್ದ ಪ್ರಕರಣಗಳು ತಾಲೂಕು ಹಳ್ಳಿಗಳ, ಮಟ್ಟಕ್ಕೂ ವ್ಯಾಪಿಸಿದ್ದು, ಆರ್ಯೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಯಾವ ಒಂದು ಕೇಸ್ ಬಂದರು ಆದಷ್ಟು ಬೇಗ ಆಸ್ವತ್ರೆಗೆ ದಾಖಲಾಗುವಂತೆ ನೋಡಿಕೊಳ್ಳಬೇಕು .
ದಾವಣಗೆರೆ ಹಾಗೂ ಹರಿಹರದಲ್ಲಿ ಹೆಚ್ಚು ಹೆಚ್ಚು ಟೆಸ್ಟ್ಗಳು ಆಗಬೇಕಾಗಿದೆ ಕೆಲ ಖಾಸಗಿ ಆಸ್ವತ್ರೆಯವರು ಪಾಸಿಟಿವ್ ವರದಿಯಾದಾಗ ಸಿ.ಜಿ. ಆಸ್ವತ್ರೆಗೆ ಕರೆ ಮಾಡಿ ಆಂಬುಲೆನ್ಸ್ ಕಳುಹಿಸಲು ಹೇಳುತ್ತಾರೆ ಎಂದು ಡಿಹೆಚ್‍ಒ ತಿಳಿಸಿದಾಗ ತಕ್ಷಣ ಜಿಲ್ಲಾಧಿಕಾರಿಗಳು ಸಂಭಂಧಿಸಿದ ಆಸ್ಪತ್ರೆಗಳವರೇ ಆಂಬುಲೇನ್ಸ್‍ನ್ನು ಕಳುಹಿಸಕೊಡಬೇಕು ನಂತರ ಅವರ ವೆಚ್ಚವನ್ನು ಭರಿಸಲಾಗುವುದು,ಇದನ್ನು ಈಗಲೇ ಆದೇಶ ಮಾಡುತ್ತೇನೆಂದರು. ಮತ್ತು ತಾಲ್ಲೋಕು ಕೇಂದ್ರಗಳಲ್ಲಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ಗಳ ವ್ಯವಸ್ಥೆ,ವೆಂಟಿಲೇಟರ್ ಹಾಗು ಹೆಚ್ಚು ಕೇಸ್ಗಳು ಬಂದರೆ ಹೇsÀಗೆ ಸಿದ್ದವಿರಬೇಕಂಬುದರ ಬಗೆಗೆ ತಿಳಿಸಿ ಕೆಲ ತಾಲೂಕು ಕೇಂದ್ರಗಳಲ್ಲಿ ನೋಂದಣಿ ಇಲ್ಲದ ವ್ಯದ್ಯರುಗಳು ಚಿಕಿತ್ಸೆ ನೀಡುತ್ತಿದ್ದು ಕೊರೋನ ಪಾಸಿಟಿವ್ ಪ್ರಕರಣಗಳ ಮಾಹಿತಿಯನ್ನು ನೀಡುತ್ತಿಲ್ಲ ಅಂತಹವರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಿ ಎಂದರು
ಜಿ.ಪಂಸಿಇಒ ಪದ್ಮ ಬಸವಂತಪ್ಪ ಮಾತನಾಡಿಹೊರ ಜಿಲ್ಲೆಗಳಿಂದ ಬಂದಿರುವ 1400 ಜನರ ಪಟ್ಟಿ ಮಾಡಲಾಗಿದ್ದು,ಅವರ ಮೇಲೆ ನಿಗಾ ಇರಿಸಲಾಗಿದೆ.ಕೆಲ ಗ್ರಾಮಗಳಲ್ಲಿ ಹೊರ ಜಿಲ್ಲೆಗಳಿಂದ ಬಂದವರನ್ನು ಊರೊಳಗೆ ಸೇರಿಸಿಕೊಳ್ಳುತ್ತಿಲ್ಲ ಎಂಬ ದೂರುಗಳಿದ್ದವು ಅಂತಹವನ್ನು ಪರಿಹರಿಸಲಾಗಿದೆ ಹಾಗೂ ಅಗತ್ಯ ಮುನ್ನೆಚ್ಚರಿಕೆ ಮತ್ತು ಮುಂಜಾಗ್ರತೆಯಂದಿರುವಂತೆ ಜಾಗೃತಿ ಮೂಡಿಸಲಾಗಿದೆ ಎಂದರು.
ಜಿಲ್ಲಾಪೊಲೀಸ್ ವರಿಷ್ಟಾಧಿsÀಕಾರಿ ಹನುಮಂತರಾಯ ಮಾತನಾಡಿ,ಯಾವುದೇ ಕೊರೊನ ಪ್ರಕರಣ ವರದಿಯಾದ ತಕ್ಷಣ ತಡಮಾಡÀದೆ ಅವರ ಎಲ್ಲಾ ಮಾಹಿತಿ ಪಡೆದು ಸೋಂಕಿತರ ಮನೆ ಹಾಗು ಮಾರ್ಗಸೂಚಿಯಂತೆ ಯಾವ ಯಾವ ಮನೆಗಳನ್ನು ಸೀಲ್ ಡೌನ್ ಮಾಡಿ ಬ್ಯಾರಿಕೇಡ್ ಹಾಕುವ ಮೂಲಕ ಮೂರು ಗಂಟೆಯೊಳಗಾಗಿ ನಿಗದಿತ ಪ್ರದೇಶವನ್ನು ಸೀಲ್ ಡೌನ್ ಮಾಡಬೇಕೆಂದರು
ಸಭೆಯಲ್ಲಿ ಉಪವಿಬಾಗಾಧಿಕಾರಿ ಮಮತ ಹೊಸಗೌಡರ್, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಮಹಾನಗರಪಾಲಿಕೆ ಆಯುಕ್ತರಾದ ವಿಶ್ವನಾಥ್ ಮುದಜ್ಜಿ, ಡಿಹೆÀಚ್‍ಒ ರಾಘವೇಂದ್ರ ಸ್ವಾಮಿ,ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಡಾ ನಟರಾಜ್, ಡಾ.ಕಾಳಪ್ಪ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರ