ಸಾಸ್ವೆಹಳ್ಳಿ: ‘ಹೋರಾಟದಿಂದ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಬಹುದಾಗಿದೆ. ಕೋರೊನಾ ಸಂದರ್ಭದಲ್ಲಿ ಕೋರನಾದ ವಿರುದ್ಧ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಖಾಯಂಗೊಳಿಸುವ ಮೂಲಕ ಅವರ ಜೀವನ ಭದ್ರತೆಯನ್ನು ಒದಗಿಸಬೇಕು ಎಂದು ಮಾಜಿ ಶಾಸಕ ಡಿ.ಜಿ ಶಾಂತನಗೌಡ ಹೇಳಿದರು.
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶೀಲಾ ಗದ್ದಿಗೇಶ್ ಸೋಮವಾರ ಆಯೋಜಿಸಿದ್ದ ಸಾಸ್ವೆಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೋರೊನಾ ವಾರಿಯರ್ಸ್ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದಲ್ಲಿಯೇ ಮಹಿಳೆಯರ ಸೇವೆಯು ಶ್ಲಾಘನೀಯವಾದದ್ದು ಆಗಿದೆ. ವಿಜ್ಞಾನಿಗಳು ಹಲವು ಕಾಯಿಲೆಗಳಿಗೆ ಔಷಧಿಯನ್ನು ಕಂಡು ಹಿಡಿದಿದ್ದಾರೆ. ವಿಜ್ಞಾನ ಜಗತ್ತು ಬಹಳ ಮುಂದುವರಿಯುತ್ತಿದೆ. ಕೋವಿಡ್ ಕಾಯಿಲೆಗೆ ನಮ್ಮ ರೋಗನಿರೋಧಕ ಶಕ್ತಿಯೇ ದೊಡ್ಡ ಔಷಧ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶೀಲಾ ಗದ್ದಿಗೇಶ್ ಮಾತನಾಡಿ, ಕೊರೊನಾ ವಾರಿಯರ್ಸ್ ಸೇವೆ ಅಮೂಲ್ಯವಾದದ್ದು ಅವರಿಗೆ ಎಷ್ಟು ಅಭಿನಂಧಿಸಿದರೂ ಸಾಲದು ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಜಿಲ್ಲಾಧ್ಯಕ್ಷ ಎಚ್.ಬಿ ಮಂಜಪ್ಪ, ತಾ.ಪಂ ಸದಸ್ಯ ಅಬಿದ್ ಅಲಿಖಾನ್, ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಚ್.ಎ ಗದ್ದಿಗೇಶ್, ಸಾದು ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಕೆ.ಜಿ ಕರೇಗೌಡ್ರು, ವೈದ್ಯರುಗಳಾದ ಡಾ.ನರೇಂದ್ರ, ಡಾ.ಚಂದ್ರಪ್ಪ, ಡಾ.ಗಿರೀಶ್, ಮುಖಂಡರಾದ ಪುಷ್ಪಲತಾ, ಪುಷ್ಪಕುಮಾರ್, ಶಂಕರಣ್ಣ, ರಾಮಣ್ಣ, ಸುಲೇಮಾನ್ ಖಾನ್, ರೋಷನ್ ಜಮೀರ್, ಎಎಸ್‍ಐ ಓಬಳೇಶ್ ನಾಯಕ, ಎಲ್ಲಾ ಇಲಾಖೆಯ ಕೊರೊನಾ ವಾರಿಯರ್ಸ್ ಇದ್ದರು.