ದಾವಣಗೆರೆ ಜು.14
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಮಂಗಳವಾರ
ಪ್ರಕಟವಾಗಿದ್ದು, ದಾವಣಗೆರೆ ಜಿಲ್ಲೆಗೆ ಶೇ.64.09 ಫಲಿತಾಂಶ
ಲಭಿಸಿದೆ. ಹೊಸದಾಗಿ 16219 ವಿದ್ಯಾರ್ಥಿಗಳು ಪಿಯು ಪರೀಕ್ಷೆ
ಬರೆದಿದ್ದು ಈ ಪೈಕಿ 10395 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ಹೊಸದಾಗಿ 4104 ವಿದ್ಯಾರ್ಥಿಗಳು ಪರೀಕ್ಷೆ
ಬರೆದಿದ್ದು 1433 ವಿದ್ಯಾರ್ಥಿಗಳು ಪಾಸಾಗಿದ್ದು ಶೇ.34.92 ಫಲಿತಾಂಶ
ಲಭಿಸಿದೆ.
ವಾಣಿಜ್ಯ ವಿಭಾಗದಲ್ಲಿ ಹೊಸದಾಗಿ 4589 ವಿದ್ಯಾರ್ಥಿಗಳು ಪರೀಕ್ಷೆ
ಬರೆದಿದ್ದು 2729 ವಿದ್ಯಾರ್ಥಿಗಳು ಪಾಸಾಗಿದ್ದು ಶೇ.59.47 ಫಲಿತಾಂಶ
ಲಭಿಸಿದೆ.
ವಿಜ್ಞಾನ ವಿಭಾಗದಲ್ಲಿ ಹೊಸದಾಗಿ 7526 ವಿದ್ಯಾರ್ಥಿಗಳು ಪರೀಕ್ಷೆ
ಬರೆದಿದ್ದು 6233 ವಿದ್ಯಾರ್ಥಿಗಳು ಪಾಸಾಗಿದ್ದು ಶೇ.82.82 ಫಲಿತಾಂಶ
ಲಭಿಸಿದೆ.
ಈ ಬಾರಿ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆ 19 ನೇ
ಸ್ಥಾನದಲ್ಲಿದೆ. ಕಳೆದ ಬಾರಿ 22 ನೇ ಸ್ಥಾನದಲ್ಲಿತ್ತು. ವಿಜ್ಞಾನ
ವಿಭಾಗದಲ್ಲಿ ಉತ್ತಮ ಫಲಿತಾಂಶ ಶೇ.82.82 ಲಭಿಸಿದೆ ಎಂದು
ಡಿಡಿಪಿಯು ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.