ದಾವಣಗೆರೆ ಜು.14
2020-21 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ
ಶಾಲೆಗಳಿಗೆ 6ನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ
ಮಾಡಲು ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು
ಜುಲೈ 31 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.
ಈ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ ಸಮವಸ್ತ್ರ,
ಪಠ್ಯಪುಸ್ತಕ ಹಾಗೂ ಇನ್ನಿತರೆ ಸಾಮಗ್ರಿಗಳನ್ನು
ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾಭ್ಯಾಸ
ನೀಡಲಾಗುತ್ತಿದೆ. ಈ ಶಾಲೆಗಳಲ್ಲಿ ಅಲ್ಪಸಂಖ್ಯಾತರ ಮುಸ್ಲಿಂ,
ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ದ, ಪಾರ್ಸಿ ವಿದ್ಯಾರ್ಥಿಗಳಿಗೆ ಶೆ.75 ರಷ್ಟು
ಮತ್ತು ಪ.ಜಾತಿ/ಪ.ಪಂ ಇತರೆ ಹಿಂದುಳಿದ ವರ್ಗದ
ವಿದ್ಯಾರ್ಥಿಗಳಿಗೆ ಶೆ.25 ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ
ಲಭ್ಯವಿದೆ.
ವಿದ್ಯಾರ್ಥಿಗಳ ದಾಖಲಾತಿಗಾಗಿ ಪೋಷಕರ ಆದಾಯ ಮಿತಿ
ರೂ.2.50 ಲಕ್ಷಗಳಿಗೆ ಮೀರಬಾರದು. ಆಸಕ್ತಿಯುಳ್ಳ
ಪೋಷಕರು ಆಯಾ ತಾಲ್ಲೂಕಿನ ಕೆಳಕಂಡ ಮೊರಾರ್ಜಿ
ದೇಸಾಯಿ ವಸತಿ ಶಾಲೆಯಲ್ಲಿ ಅರ್ಜಿಯ ನಮೂನೆಯನ್ನು
ಪಡೆದು ಜುಲೈ 31 ರೊಳಗಾಗಿ ಸಲ್ಲಿಸಬಹುದು.
ಅರ್ಜಿ ಪಡೆಯಲ್ಚಿಸುವರು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ
ಬಾಲಕಿಯರ ವಸತಿ ಶಾಲೆ, ನಿಜಲಿಂಗಪ್ಪ ಬಡಾವಣೆ, ದಾವಣಗೆರೆ ಟೌನ್,
ದಾವಣಗೆರೆ ಮೊ: 7996212465. ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ
ವಸತಿ ಶಾಲೆ, ಕೊಂಡಜ್ಜಿ, ಹರಿಹರ ತಾಲ್ಲೂಕು ದಾವಣಗೆರೆ ಜಿಲ್ಲೆ
ಮೊ: 9036866642. ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ
ಬಾಲಕಿಯರ ವಸತಿ ಶಾಲೆ, ಕೆರೆಬಿಳಚಿ, ಚನ್ನಗಿರಿ ತಾಲ್ಲೂಕು
ದಾವಣಗೆರೆ ಮೊ: 9036866642. ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ
ಬಾಲಕಿಯರ ವಸತಿ ಶಾಲೆ ಹೊನ್ನಾಳಿ ತಾಲ್ಲೂಕು ದಾವಣಗೆರೆ ಮೊ:
- ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ
ವಸತಿ ಶಾಲೆ, ಜಗಳೂರು ತಾಲ್ಲೂಕು ದಾವಣಗೆರೆ
ಮೊ: 8296909570. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-250022,
250066 ಗಳನ್ನು ಸಂಪರ್ಕಿಸಬಹುದೆಂದು ಅಲ್ಪಸಂಖ್ಯಾತರ
ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.