[19:44, 7/14/2020] Girish Press Sasvahalli: ಹೊನ್ನಾಳಿ: ಕರೋನಾದ ಸಂಕಷ್ಟದ ಸಮಯದಲ್ಲಿ ಕರೋನಾ ವಾರಿರ‍್ಸ್ನ ಕಾಲ್ದಳವಾಗಿ ಕೆಲಸ ಮಾಡುತ್ತಿರುವ ಸ್ನಾತಕೋತ್ತರ ವಿದ್ಯಾರ್ಥಿಗಳ ಬೇಡಿಕೆಯು ನ್ಯಾಯ ಸಮ್ಮತವೂ ಮತ್ತು ಜೀವನಾವಶ್ಯಕವೂ ಆಗಿದೆ. ಅವರ ಹೋರಾಟಕ್ಕೆ ಭಾರತೀಯ ವೈದ್ಯಕೀಯ ಸಂಘ ಹೊನ್ನಾಳಿ ಶಾಖೆ ಸಂಪೂರ್ಣ ಬೆಂಬಲ ಘೋಷಿಸುತ್ತದೆ ಆದ್ದರಿಂದ ಅವರ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ನಿರ್ದೇಶಕ ಡಾ.ಎಚ್.ಪಿ ರಾಜ್‌ಕುಮಾರ್ ಒತ್ತಾಯಿಸಿದರು.
ಜೆ.ಜೆ.ಎಂ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳ ಬೇಡಿಕೆಯನ್ನು ಸರ್ಕಾರವು ಈಡೇರಿಸಬೇಕು ಎಂದು ತಹಶಿಲ್ದಾರ್ ಮುಖಾಂತರ ಮನವಿ ಪತ್ರ ಸಲ್ಲಿಸಿ ಅವರು ಮಂಗಳವಾರ ಮಾತನಾಡಿದರು.
ಅನಿರ್ದಿಷ್ಟಾವಧಿ ಹೋರಾಟಕ್ಕೆ ಹೋರಾಟವು ಕಳೆದ ೧೫ ದಿನಗಳಿಂದ, ತಮ್ಮ ೧೬ ತಿಂಗಳ ಶಿಷ್ಯವೇತನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇಲ್ಲಿವರೆಗೂ ಸರ್ಕಾರವಾಗಲಿ, ಸದರಿ ಕಾಲೇಜಿನ ಆಡಳಿತ ಮಂಡಳಿಯಾಗಲಿ ಅವರ ನ್ಯಾಯ ಸಮ್ಮತ ಬೇಡಿಕೆಯನ್ನು ಈಡೇರಿಸಿಲ್ಲ. ಇದು ರಾಜ್ಯದ ಸಮಸ್ಯೆಯಲ್ಲ ಕೇವಲ ಒಂದು ಕಾಲೇಜಿನ ಸಮಸ್ಯೆಯಾಗಿದೆ. ಈ ವಿದ್ಯಾರ್ಥಿಗಳ ಬೇಡಿಕೆಯನ್ನು ರಾಜ್ಯ ಸರ್ಕಾರ ಕೂಡಲೇ ಈಡೇರಿಸಿ ಅವರಿಗೆ ಸಲ್ಲಬೇಕಾದ ೧೬ ತಿಂಗಳ ಶಿಷ್ಯವೇತನವನ್ನು ನೀಡಬೇಕು. ಈ ಹೋರಾಟವು ರಾಜ್ಯವ್ಯಾಪಿ ಹೋರಾಟವಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವೈದ್ಯರುಗಳಾದ ಡಾ. ಜಗದೀಶ್ ಕೆ., ಡಾ. ನಾಗರಾಜ್ ಹತ್ವಾರ್ ಇದ್ದರು. ತಹಶಿಲ್ದಾರ್ ತುಷಾರ್ ಬಿ ಹೊಸುರು ಮನವಿ ಪತ್ರ ಸ್ವೀಕರಿಸಿದರು.
೧೪ ಎಚ್‌ಎನ್‌ಎಲ್೧
ಹೊನ್ನಾಳಿ ತಹಶಿಲ್ದಾರ್‌ಗೆ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ವೈದ್ಯಕೀಯ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವಂತೆ ಮನವಿ ಪತ್ರ ನೀಡಿದರು.