ದಾವಣಗೆರೆ ಜು.14
2020-21ನೇ ಸಾಲಿನಲ್ಲಿ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ
ನಿಗಮದಿಂದ ಸವಿತಾ ಸಮಾಜ ಹಾಗೂ ಇದರ ಉಪಜಾತಿಗೆ ಸೇರಿದ
ಜನರ ಆರ್ಥಿಕ ಅಭಿವೃದ್ಧಿಗಾಗಿ ಸಾಂಪ್ರದಾಯಿಕ ವೃತ್ತಿದಾರರ ಸಾಲ
ಯೋಜನೆ ಮತ್ತು ಸ್ವಯಂ ಉದ್ಯೋಗ ಸಾಲ ಯೋಜನೆಯಲ್ಲಿ
ಸಾಲ ಮತ್ತು ಸಹಾಯಧನದ ಸೌಲಭ್ಯ ಪಡೆಯಲು
ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸವಿತಾ ಸಮಾಜಕ್ಕೆ ಸೇರಿರುವ ಪರಿಯಾಳ, ಅಂಬಟ್ಟನ್, ಬಜಂತ್ರಿ,
ಬಂಡಾರಿ, ಚೌರಿಯ, ಹಡಪದ, ಕವುಟಿಯನ್, ಕೆಲಸಿ, ಕ್ಷೌರಿಕ,
ಕ್ಷೌರದ್, ಮಹಾಲೆ, ಮಂಗಳ, ಮೇಲಗಾರ, ನಾಡಿಗ, ನಾಪಿತ,
ನವಲಿಗ್, ನಾವಿ, ನಯನಜ ಕ್ಷತ್ರಿಯ, ನ್ಹಾವಿ, ವಾಜಾಂತ್ರಿ, ಸವಿತ,
ನಯನಜ ಕ್ಷತ್ರಿ, ನಾಡಿಗ್, ಕ್ಷೌರಿಕ್, ಕ್ಷೌರಿಕ ಇವರು ಅರ್ಜಿ
ಸಲ್ಲಿಸಬಹುದು.
ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-2ಎ ಅಂದರೆ
ಮೇಲೆ ತಿಳಿಸಿರುವಂತೆ ಸವಿತಾ ಸಮಾಜ ಹಾಗೂ ಇದರ
ಉಪಜಾತಿಗಳಿಗೆ ಸೇರಿದವರಾಗಿರಬೇಕು. ರಾಜ್ಯ ಸರ್ಕಾರದ
ಯೋಜನೆಗಳಿಗೆ ಅವರ ಕುಟುಂಬದ ವಾರ್ಷಿಕ ವರಮಾನ
ಗ್ರಾಮಾಂತರ ಪ್ರದೇಶದವರಿಗೆ ರೂ. 40,000/-ಗಳು ಪಟ್ಟಣ
ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು.
ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ
ಮಿತಿಯಲ್ಲಿರಬೇಕು. ಅರ್ಜಿದಾರರು ಕೆ.ವೈ.ಸಿ. ಬಗ್ಗೆ ಆಧಾರ್
ಕಾರ್ಡ್/ಚುನವಣಾ ಗುರುತಿನ ಚೀಟಿ/ಪಾನ್ ಕಾರ್ಡ್
ದಾಖಲೆಗಳನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು.
ಅರ್ಜಿದಾರರು ಐ.ಎಫ್.ಎಸ್.ಸಿ. ಕೋಡ್ ಹೊಂದಿರುವ
ರಾಷ್ಟ್ರೀಕೃತ/ಗ್ರಾಮೀಣ ಬ್ಯಾಂಕ್‍ಗಳಲ್ಲಿ ಉಳಿತಾಯ ಖಾತೆ
ಹೊಂದಿರಬೇಕು.
ಈ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಇಚ್ಛಿಸುವ ಈ
ಮೇಲ್ಕಂಡ ಸಮಾಜದವರು ಉಚಿತವಾಗಿ ಅರ್ಜಿ ನಮೂನೆಯನ್ನು
ಜಿಲ್ಲಾ ಕಛೇರಿಯಲ್ಲಿ ಅಥವಾ ನಿಗಮದ ವೆಬ್‍ಸೈಟ್‍ನಲ್ಲಿ ಪಡೆದು,
ಅರ್ಜಿಯೊಂದಿಗೆ ಜಾತಿ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್
ಮತ್ತು ಫೋಟೋವನ್ನು ಅರ್ಜಿಯೊಂದಿಗೆ ಲಗತ್ತಿಸಿ ಭರ್ತಿ
ಮಾಡಿದ ಅರ್ಜಿಯನ್ನು ದಾಖಲಾತಿಗಳೊಡನೆ ಡಿ.ದೇವರಾಜ ಅರಸು
ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಛೇರಿಗೆ
ಆಗಸ್ಟ್ 03 ರೊಳಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ಕಛೇರಿಯನ್ನು (ಕಛೇರಿ
ದೂರವಾಣಿ ಸಂಖ್ಯೆ: 08192-230934) ಅಥವಾ ನಿಗಮದ ವೆಬ್‍ಸೈಟ್
ತಿತಿತಿ.ಜbಛಿಜಛಿ.ಞಚಿಡಿಟಿಚಿಣಚಿಞಚಿ.gov.iಟಿ ಅನ್ನು ಸಂಪರ್ಕಿಸುವಂತೆ ಪ್ರಕಟಣೆ
ತಿಳಿಸಿದೆ.