ದಾವಣಗೆರೆ ಜಿಲ್ಲೆ july15 ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ದಿನಾಂಕ 14 2 2020 ರಂದು ಒಂದು ಘಟನೆ ನಡೆದಿದೆ ಅದು ಏನೆಂದರೆ ಮನೆ ತೊರೆದು ಬಂದಿದ್ದ ಬಾಲಕನನ್ನು ಮತ್ತೆ ಪೋಷಕರ ಮಡಿಲಿಗೆ ಸೇರಿಸುವುದರ ಮೂಲಕ ಮಾನವೀಯತೆ ಮೆರೆದ ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಮುಖಂಡರಾದ ಡಿ.ಎಸ್ ಪ್ರದೀಪ್ ಮಂಗಳವಾರ ಬೆಳಗ್ಗೆ ಗೊಲ್ಲರಹಳ್ಳಿ ಗ್ರಾಮದಲ್ಲಿರುವ ಶಂಕರ್ ಪೆಟ್ರೋಲ್ ಬಂಕ್ ಬಳಿ ಒಬ್ಬ ಬಾಲಕ ಅನುಮಾನಸ್ಪದವಾಗಿ ಓಡಾಡುತ್ತಿರುವುದನ್ನು ಪ್ರದೀಪ್ ರವರ ಕಣ್ಣಿಗೆ ಬೀಳುತ್ತಾನೆ ತದಾದ ನಂತರ ಆ ಬಾಲಕ ಅಲ್ಲಿಂದ ಹೊನ್ನಾಳಿಯ ಕಡೆ ಚಲಿಸುತ್ತಾನೆ ಅವನನ್ನು ಗಮನಿಸಿದ ಡಿ.ಎಸ್ ಪ್ರದೀಪ್ ಮತ್ತು ಅವರ ಸ್ನೇಹಿತರೊಂದಿಗೆ ಬೈಕಿನಲ್ಲಿ ತೆರಳಿ ಅವನನ್ನು ಹಿಂಬಾಲಿಸುತ್ತಿರುವುದನ್ನು ನೋಡಿ ಅವನು ತಪ್ಪಿಸಿಕೊಂಡು ಹೋಗಲಿಕ್ಕೆ ಪ್ರಯತ್ನಿಸುತ್ತಾನೆ ಆದರೆ ಅವನನ್ನು ಬಿಡದೆ ಹಿಡಿದುಕೊಂಡು ವಿಚಾರಿಸಿ ಅವರ ಪೋಷಕರ ಫೋನ್ ನಂಬರ್ ತೆಗೆದುಕೊಂಡು ಅವರಿಗೆ ಕರೆಯನ್ನು ಮಾಡಿ ನಿಮ್ಮ ಮಗ ನಮ್ಮ ಬಳಿ ಇದ್ದಾನೆ ಕರೆದುಕೊಂಡು ಹೋಗಿ ಎಂದು ಹೇಳಿದಾಗ ಆ ಪೋಷಕರು ಬಂದು ಡಿ.ಎಸ್ ಪ್ರದೀಪ್ ಗೌಡ್ರು ರವರಿಗೆ ಕೆ ಕಳೆದುಹೋದ ನನ್ನ ಮಗನನ್ನು ಹುಡುಕಿ ಕೊಟ್ಟಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಇದೇ ಸಮಯವನ್ನು ನೋಡಿ ಅಲ್ಲಿ ನಿಲ್ಲಿಸಿದ್ದ ಬೈಕನ್ನು ದುಷ್ಕರ್ಮಿಗಳು ಕಳ್ಳತನವನ್ನು ಮಾಡಿದ್ದಾರೆ. ಇದನ್ನು ಮನಗೊಂಡ ಡಿ.ಎಸ್ ಪ್ರದೀಪ್ ಅವರು ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿ ನನ್ನ ಬೈಕನ್ನು ಹುಡುಕಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.