ದಾವಣಗೆರೆ ಜು.15
ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್
ಭೀಮಾ ಯೋಜನೆಯಡಿ ಬೆಳೆ ಪರಿಹಾರ ಮೊತ್ತವನ್ನು
ಸಂರಕ್ಷಣೆ ತಂತ್ರಾಂಶ ಮೂಲಕ ನೀಡುವ ಸಂದರ್ಭಗಳಲ್ಲಿ
ರೈತರು ಕೆಲವೊಮ್ಮೆ ಬಹುಖಾತೆಗಳನ್ನು ಹೊಂದಿದ್ದು,
ಆಧಾರ್ ಲಿಂಕ್ ಮಾಡಿಸದೇ ಇದ್ದ ಸಂದರ್ಭಗಳಲ್ಲಿ/ಆಧಾರ್ ಲಿಂಕ್
ಮಾಡಿಸಿದ್ದರೂ ಖಾತೆಗಳು ವರ್ಷಗಳಿಂದ ಉಪಯೋಗಿಸದೇ
ಚಾಲ್ತಿಯಲ್ಲಿ ಇಲ್ಲದಿದ್ದರೆ ಈ ರೈತರ ಖಾತೆಗಳಿಗೆ ನಗದು
ವರ್ಗಾಯಿಸುವಾಗ ಆಧಾರ್ ನಂಬರ್‍ನಲ್ಲಿ ತಪ್ಪು (ಇಡಿಡಿoಡಿ iಟಿ ಂಚಿಜhಚಿಡಿಚಿ
ಓumbeಡಿ) ಖಾತೆ ಇನ್‍ಆಕ್ಟಿವ್ (ಂಛಿಛಿouಟಿಣ iಟಿಚಿಛಿಣive) ಮತ್ತು ಆಧಾರ್ ನಂಬರ್
ಖಾತೆಗೆ ಸೀಡ್ ಆಗದೇ ಇರುವುದು(ಂಜಜhಚಿಡಿ ಟಿoಣ seeಜeಜ) ಎಂಬ
ತಾಂತ್ರಿಕ ತೊಂದರೆಗಳು ಎದುರಾಗುತ್ತಿರುತ್ತದೆ.
ಇದರಿಂದಾಗಿ ರೈತರು ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ
ಜೋಡಣೆ ಮಾಡಿಸದೇ ಇದ್ದರೆ ಬೆಳೆ ವಿಮೆ ಪರಿಹಾರ ಇತ್ಯರ್ಥ
ಪಡಿಸುವಲ್ಲಿ ಅನಗತ್ಯ ವಿಳಂಬವಾಗುತ್ತದೆ. ಆದುದರಿಂದ
ಬೆಳೆವಿಮೆಗೆ ನೊಂದಾಯಿಸಿದ ರೈತರು ಸಕಾಲದಲ್ಲಿ ಬೆಳೆವಿಮೆ
ಪರಿಹಾರ ಇತ್ಯರ್ಥ ಪಡಿಸಲು ಅನುಕೂಲವಾಗುವಂತೆ ಬ್ಯಾಂಕ್
ಖಾತೆಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.