ದಾವಣಗೆರೆ ಜು.16
ನಗರದ ದೇವರಾಜ ಅರಸು ಬಡಾವಣೆಯಲ್ಲಿಯರುವ
ಕಾಂಪೋಸಿಟ್ ರೀಜನಲ್ ಸೆಂಟರ್‍ನಲ್ಲಿ(ಸಿಆರ್‍ಸಿ) ಜು.17 ರಂದು ಬೆಳಿಗ್ಗೆ 11
ಗಂಟೆಗೆ ಅಡಿಪ್ಸ್ ಯೋಜನೆಯಡಿ ಬೌದ್ದಿಕ ಅಂಗವೈಕಲ್ಯತೆ
ಹೊಂದಿರುವವರಿಗೆ ಟೀಚಿಂಗ್ ಲರ್ನಿಂಗ್ ಮಟೀರಿಯಲ್ಸ್ ಕಿಟ್ (ಟಿಎಲ್‍ಎಂ)
ವಿತರಣೆ ಮಾಡಲಾಗುವುದು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್ ಇವರು ಈ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೋವಿಡ್ ಹಿನ್ನೆಲೆಯಲ್ಲಿ
ಸಾಂಕೇತಿಕವಾಗಿ ಮೊದಲನೇ ಹಂತದಲ್ಲಿ 7 ಜನರಿಗೆ ಟಿಎಲ್‍ಎಂ
ವಿತರಣೆ ಮಾಡುವರು.
ಈ ಯೋಜನೆಯಡಿ ಒಟ್ಟು 87 ಬೌದ್ದಿಕ ಅಂಗವೈಕಲ್ಯತೆ
ಹೊಂದಿರುವ ಮಕ್ಕಳಿಗೆ ಟೀಚಿಂಗ್ ಲರ್ನಿಂಗ್
ಮಟೀರಿಯಲ್‍ಗಳನ್ನು ನೀಡುವ ಗುರಿ ಹೊಂದಲಾಗಿದ್ದು
ಕೋವಿಡ್ ಹಿನ್ನೆಲೆಯಲ್ಲಿ ಮೊದಲನೇ ಹಂತದಲ್ಲಿ ಜು.17 ರಂದು 7
ಜನರಿಗೆ ನೀಡಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ಉಳಿದ 80
ಟಿಎಲ್‍ಎಂಗಳನ್ನು ನಂತರದಲ್ಲಿ ಸುರಕ್ಷತಾ
ಕ್ರಮಗಳನ್ನು ಕೈಗೊಂಡು ದಿನಕ್ಕೆ 5 ರಿಂದ 10
ಕಿಟ್‍ಗಳನ್ನು ವಿತರಣೆ ಮಾಡಲಾಗುವುದು ಎಂದು ಪ್ರಕಟಣೆ
ತಿಳಿಸಿದೆ.

Leave a Reply

Your email address will not be published. Required fields are marked *