ದಾವಣಗೆರೆ ಜು.16 
ಜಿಲ್ಲಾ ಆಸ್ಪತ್ರೆಗಳು ಹಾಗೂ ಜಿಲ್ಲಾ ಮಟ್ಟದ
ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳನ್ನು
ಸಮರ್ಪಕವಾಗಿ ನಿಭಾಯಿಸಲು ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ
ವೈದ್ಯಕೀಯ ಸೇವೆಯ ಹುದ್ದೆಗಳನ್ನು ಗರಿಷ್ಟ 6
ತಿಂಗಳ ಅವಧಿಗೆ ಗುತ್ತಿಗೆ/ಹೊರಗುತ್ತಿಗೆ ಆಧಾರದಲ್ಲಿ
ನೇಮಕ ಮಾಡಿಕೊಳ್ಳಲು ನೇರ ಸಂದರ್ಶನ
ಕರೆಯಲಾಗಿದೆ.
ಜಿಲ್ಲಾಧಿಕಾರಿಗಳ ಸಹಮತದೊಂದಿಗೆ ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ನೇರ ಸಂದರ್ಶನ
(ತಿಚಿಟಞ iಟಿ Iಟಿಣeಡಿvieತಿ) ನಡೆಸಿ ದಾಖಲಾತಿಗಳನ್ನು ಪರಿಶೀಲಿಸಿ
ನಿಯಮಾನುಸಾರ ಈ ಹುದ್ದೆಗಳಿಗೆ ನೇಮಕಾತಿ
ಮಾಡಿಕೊಳ್ಳಲಿದ್ದು, ಅರ್ಹ ವೈದ್ಯರು/ತಜ್ಞವೈದ್ಯರು/
ಅರೆವೈದ್ಯಕೀಯ (ಪಲ್ಮನಾಲೊಜಿಸ್ಟ್ 02, ಜನರಲ್ ಮೆಡಿಸಿನ್ 2,
ಎಮೆರ್ಜೆನ್ಸಿ ಮೆಡಿಸಿನ್ 02 ಮತ್ತು ಅನಸ್ತೇಷಿಯಾ 01
ವೈದ್ಯರು/ತಜ್ಞವೈದ್ಯರು ಹಾಗೂ 13 ಸಂಖ್ಯೆಯಲ್ಲಿ
ಶುಶ್ರೂಷಕರು) ಸಿಬ್ಬಂದಿಯವರಿಗೆ ಗುತ್ತಿಗೆ ಆಧಾರದ
ಮೇಲೆ ಗರಿಷ್ಟ 6 ತಿಂಗಳ ಅವಧಿಗೆ ನೇಮಕಾತಿ ಮಾಡಲು
ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನ
ಕರೆಯಲಾಗಿತ್ತು.
ಆದರೆ ಸಂದರ್ಶನಕ್ಕೆ ವೈದ್ಯರು
ಅವಶ್ಯಕತೆಗನುಗುಣವಾಗಿ ಹಾಜರಾಗದೇ ಇರುವುದರಿಂದ
ಜುಲೈ 18 ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾಧಿಕಾರಿಗಳ
ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ದಾವಣಗೆರೆ
ಇಲ್ಲಿ ಅರ್ಹ ಅಭ್ಯರ್ಥಿಗಳಿಂದ ಕೆಳಕಂಡಂತೆ ನೇರ ಮರು
ಸಂದರ್ಶನ (ತಿಚಿಟಞ iಟಿ Iಟಿಣeಡಿvieತಿ) ಕರೆಯಲಾಗಿದೆ.
ಅಭ್ಯರ್ಥಿಗಳು ಜುಲೈ 17 ರಂದು ಬೆಳಿಗ್ಗೆ 10.30 ರಿಂದ
ಮದ್ಯಾಹ್ನ 01.30 ರೊಳಗೆ ಈ ಕಚೆÉೀರಿ (ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ, ದಾವಣಗೆರೆ)ಗೆ
ಹಾಜರಾಗಿ ಸಂಬಂಧಪಟ್ಟ ವಿಭಾಗದಲ್ಲಿ ವಿದ್ಯಾರ್ಹತೆಯ ಅರ್ಹತಾ
ಮೂಲ ದಾಖಲೆಗಳ ಪರಿಶೀಲನೆ ಮಾಡಿಸಿ, ಅರ್ಹತಾ ದಾಖಲೆಗಳ
ಒಂದು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳನ್ನು
ಸಲ್ಲಿಸಬೇಕೆಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *