ದಾವಣಗೆರೆ ಜು.17
ಪೊಲೀಸ್ ಮತ್ತು ಸೈನಿಕರ ಮಧ್ಯೆ ಯಾವುದೇ
ವ್ಯತ್ಯಾಸವಿಲ್ಲ. ಪೊಲೀಸರು ಒಂದು ರೀತಿಯಲ್ಲಿ ಸೈನಿಕರು.
ಚಾಲೆಂಜ್ ಬಂದಾಗ ಎದುರಿಸಬೇಕು ಎಂದು ಎಡಿಜಿಪಿ ಡಾ.ಅಮರ್
ಕುಮಾರ್ ಪಾಂಡೆ ಹೇಳಿದರು.
ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಗೆ ಭೇಟಿ ನೀಡಿ,
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ
ಸಂದರ್ಭದಲ್ಲಿ ಬಹಳ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾವು
ಸಾಗುತ್ತಿದ್ದೇವೆ. ಈ ವೇಳೆ ಪೊಲೀಸರ ಜವಾಬ್ದಾರಿ ಹೆಚ್ಚಿದೆ. ಈ
ಸಮಯದಲ್ಲಿ ಪೊಲೀಸ್‍ನವರಿಗೆ ಕೋವಿಡ್ ವಾರಿಯರ್ ಎಂದು
ಹೇಳಲಾಗುತ್ತಿದ್ದು, ಯುದ್ದ ಭೂಮಿಯಲ್ಲಿ ಸಾಗುವ
ವಾತಾವರಣ ಇದಾಗಿದೆ ಎಂದರು.
ಕೊರೊನಾ ಸಂದರ್ಭದಲ್ಲಿ ಬಹಳಷ್ಟು ಒಳ್ಳೆಯ ಹಾಗೂ
ಪಾಸಿಟಿವ್ ಭಾವನೆಯಿಂದ ಪೊಲೀಸ್ ಅಧಿಕಾರಿಗಳು ಕೆಲಸ
ಮಾಡುತ್ತಿದ್ದಾರೆ. ಜನರಿಗೂ ಕೂಡ ವೈರಸ್ ತುಂಬಾ
ಅಪಯಕಾರಿ ಎಂದು ತಿಳಿದಿದೆ. ಈ ಹಿನ್ನೆಲೆಯಲ್ಲಿ ಬಹಳ
ಸೌಹಾರ್ದತೆಯಿಂದ ಪೊಲೀಸರಿಗೆ ಜನರು ಸ್ಪಂದನೆ
ನೀಡುತ್ತಿದ್ದಾರೆ ಎಂದ ಅವರು, ಬಹಳಷ್ಟು ಜಿಲ್ಲೆಗಳಿಗೆ ಭೇಟಿ
ನೀಡಲಾಗಿದೆ. ಈಗಾಗಲೇ 5 ಜಿಲ್ಲೆಗಳಿಗೆ ಭೇಟಿ ನೀಡಿದ್ದು, ಇದೀಗ
ದಾವಣಗೆರೆ ಜಿಲ್ಲೆಗೆ ಬಂದಿದ್ದೇನೆ. ಅಧಿಕಾರಿಗಳು, ಪೊಲೀಸ್
ಸಿಬ್ಬಂದಿಗಳು ತುಂಬಾ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ.
ಒಂದು ಕಡೆ ಜನರ ರಕ್ಷಣೆ, ಇನ್ನೊಂದೆಡೆ ಅವರ ಬಗ್ಗೆ ಕೂಡ
ಗಮನ ಹರಿಸಬೇಕಾಗಿದೆ. ಈ ಎರಡು ಸಂದರ್ಭದಲ್ಲಿ ಉತ್ತಮ
ರೀತಿಯಲ್ಲಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದಾರೆ ಎಂದು
ಶ್ಲಾಘಿಸಿದರು.
ಕೆಲವು ಜಿಲ್ಲೆಯಲ್ಲಿ ಪೊಲೀಸರಿಗೂ ಸೋಂಕು
ಹರಡಿರುವುದು ಕಂಡುಬಂದಿದೆ. ಈ ಬಗ್ಗೆ ಅಧಿಕಾರಿಗಳು, ಪೊಲೀಸ್
ಸಿಬ್ಬಂದಿಗಳು ಎಚ್ಚೆತ್ತು ಕೆಲಸ ನಿರ್ವಹಿಸುವ ಮೂಲಕ ಜಾಗೃತಿ
ವಹಿಸಬೇಕು. ಪ್ರತಿಯೊಬ್ಬರು ಸಾಮಾಜಿಕ ಅಂತರ
ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸಿಕೊಂಡು ಸ್ಯಾನಿಟೈಸರ್
ಬಳಕೆ ಮಾಡಬೇಕು. ಆ ಮೂಲಕ ಸೋಂಕು ಬಾರÀದಂತೆ
ಹಾಗೂ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಕೊರೊನಾ ಸಂದರ್ಭದಲ್ಲಿ ಕ್ರೈಂ ಬಗ್ಗೆ ತುಂಬಾ
ಎಚ್ಚರವಹಿಸಿದ್ದು, ತುಲನಾತ್ಮಕ ರೀತಿಯಲ್ಲಿ ಪರಿಶೀಲನೆ
ನಡೆಸುತ್ತಿದ್ದೇವೆ. ಇಲ್ಲಿಯತನಕ ತುಂಬಾ ಗಂಭೀರವಾದ
ಘಟನೆ, ಸನ್ನಿವೇಶ ಉಂಟಾಗಿಲ್ಲ ಎಂದು ತಿಳಿಸಿದರು.
ತುಂಗಾಗೆ ಸನ್ಮಾನ..
ಚನ್ನಗಿರಿ ತಾಲ್ಲೂಕು ಸೂಳೆಕೆರೆ ಗುಡ್ಡದಲ್ಲಿ ಇತ್ತೀಚೆಗೆ ನಡೆದ
ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಪೊಲೀಸ್
ಡಾಗ್ ಸ್ಕ್ವಾಡ್‍ನ ‘ತುಂಗಾ’ (ಡಾಬರ್ ಮನ್ ಹೆಣ್ಣು ನಾಯಿ) ತುಂಬಾ ಚೆನ್ನಾಗಿ
ಕೆಲಸ ನಿರ್ವಹಿಸಿದೆ. 11 ಕಿ.ಮೀ ಓಡಿ ಕೊಲೆ ಆರೋಪಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ
ಸನ್ಮಾನ ಮಾಡಿದ್ದು, ನಮಗೆ ಬಹಳ ಹೆಮ್ಮೆ ಇದೆ.
-ಎಡಿಜಿಪಿ ಡಾ.ಅಮರ್ ಕುಮಾರ್ ಪಾಂಡೆ
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ
ಹನುಮಂತರಾಯ ಮತ್ತು ಇತರೆ ಪೊಲೀಸ್ ಸಿಬ್ಬಂದಿಗಳು
ಹಾಜರಿದ್ದರು.