ದಾವಣಗೆರೆ ಜಿಲ್ಲೆ ಜುಲೈ 17 ಹೊನ್ನಾಳಿಯಲ್ಲಿ ಇಂದು ಭಾರತದ ಸಂವಿಧಾನ ರಚನೆಗೆ ಅಭೂತಪೂರ್ವ ಕೆಲಸ ಮಾಡಿ ದೇಶದ ಎಲ್ಲ ವರ್ಗದ ಜನರ ಏಳಿಗೆಗಾಗಿ ಶ್ರಮಿಸಿದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಶೋಷಿತರಿಗೆ ಸಾಮಾಜಿಕ ನ್ಯಾಯ ಒದಗಿಸಲು ಮುಂದಾದವರು ಮಹಾರಾಷ್ಟ್ರದಲ್ಲಿರುವ ಅವರ ರಾಜ ಗೃಹವನ್ನು ದಿನಾಂಕ 7/7/ 2020ರಂದು ದುಷ್ಕರ್ಮಿಗಳು ನಾಶಗೊಳಿಸುವ ಮೂಲಕ ಅವರ ವ್ಯಕ್ತಿತ್ವಕ್ಕೆ ಧಕ್ಕೆ ಉಂಟುಮಾಡುವ ಕೃತ್ಯ ಖಂಡನೀಯವಾಗಿದೆ ಹಾಗೂ ರಾಜ್ಯ ಗೃಹಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಪ್ರಜಾಪ್ರಭುತ್ವದಲ್ಲಿ ವಿಚಾರವಿರಲಿ ಚರ್ಚೆಯ ಮೂಲಕ ಬಗೆಹರಿಸಬೇಕು. ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಮನೆಯ ಮೇಲೆ ದಾಳಿ ಮಾಡಿ ಅವರಿಗೆ ಅಗೌರವ ತೋರಿದ್ದು , ನೀಚಕೋರರ ಅಗೋರ ಕೃತ್ಯ ವಾಗಿರುತ್ತದೆ.
ಹೀನಕೃತ್ಯ ಮಾಡಿರುವವರನ್ನು ಮಹಾರಾಷ್ಟ್ರ ಮೈತ್ರಿ ಸರ್ಕಾರದ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಇವರನ್ನು ಗಡಿಪಾರು ಮಾಡಬೇಕು.ಒಂದು ವೇಳೆ ಗಡಿಪಾರು ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದು ಹೊನ್ನಾಳಿ ತಾಲೂಕು ಮಾದಿಗ ದಂಡೋರ ಸಮಿತಿ( ರಿ)ಅಧ್ಯಕ್ಷರು, ಪದಾಧಿಕಾರಿಗಳು ಒತ್ತಾಯಿಸುತ್ತಾ ತಹಶೀಲ್ದಾರ್ ಮುಖಾಂತರ ಸನ್ಮಾನ್ಯ ಪ್ರಧಾನಮಂತ್ರಿಗಳು ಭಾರತ ಸರ್ಕಾರ ನವದೆಹಲಿ ಇವರಿಗೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾದವರು:- ಮಾದಿಗ ದಂಡೋರ ಸಮಿತಿಯ ಗೌರವಾಧ್ಯಕ್ಷರಾದ ದಿಡಗೂರು ರುದ್ರೇಶ್, ಅಧ್ಯಕ್ಷರಾದ ಜಿ.ಹೆಚ್ ತಮ್ಮಣ್ಣ ದಿಡಗೂರು, ಪ್ರಧಾನ ಕಾರ್ಯದರ್ಶಿ ಮಂಜು ಮಾರಿಕೊಪ್ಪ ,ಕರವೇ ಶ್ರೀನಿವಾಸ್, ಕತ್ತಿಗಿ ನಾಗರಾಜ್ ,ಮುಂತಾದವರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು