ದಾವಣಗೆರೆ ಜು.19
ಜಿಲ್ಲಾ ಆರ್ಯೋಗ್ಯ ಕುಂಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಯ ವತಿಯಿಂದ ರಾಷ್ಟ್ರೀಯ ಆರ್ಯೋಗ್ಯ ಅಭಿಯಾನದ ಕೋವಿಡ್-19 ನಿಯಂತ್ರಣದ ಕಾರ್ಯಕ್ರಮದ ಪ್ರಯೋಗಶಾಲೆಯಲ್ಲಿ ಕಾರ್ಯನಿರ್ವಹಿಸಲು ಮೈಕ್ರೋಬಯೋಲಾಜಿಸ್ಟ್ ಹುದ್ದೆಯನ್ನು ಮೆರಿಟ್ ಆಧಾರದ ಮೇಲೆ 3 ತಿಂಗಳ (ಅಕ್ಟೋಬರ್-20) ಅವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು.
ಎಂ.ಎಸ್ಸಿ ಮೆಡಿಕಲ್, ಮಕ್ರೋಬಯೋಲಾಜಿಸ್ಟ್, ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ಸಂಭದಿಸಿದ ಮೂಲ ದಾಖಲಾತಿಗಳೊಂದಿಗೆ ಒಂದು ಸೆಟ್ ಜೇರಾಕ್ಸ್ ಪ್ರತಿಗಳೊಂದಿಗೆ ನೇರ ಸಂದರ್ಶನಕ್ಕೆ ಜು.23 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2ಗಂಟೆಯ ಒಳಗಾಗಿ ಜಿಲ್ಲಾ ಚಿಗಟೇರಿ ಆಸ್ವತ್ರೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಇಲ್ಲಿ ಹಾಜರಾಗಬೇಕು.
ನೇಮಕಾತಿಯ ಆಯ್ಕೆಯಲ್ಲಿ ಸಮಿತಿಯ ತಿರ್ಮಾನವೆ ಅಂತಿಮವಾಗಿರುತ್ತದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ರಾಘವನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ – 08192-297171, 08192-223761, ಸಂಪರ್ಕಿಸಬಹುದು.