ದಾವಣಗೆರೆ ಜು.20
   ಜಿಲ್ಲೆಯಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿಗೆ
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್
ಬಿಮಾ(ವಿಮಾ) ಯೋಜನೆಯನ್ನು ಜಾರಿಗೊಳಿಸಿ ಜೂ.06 ರಂದು
ಸರ್ಕಾರದ ಆದೇಶದಲ್ಲಿ ಅಧಿಸೂಚನೆ ಮಾಡಲಾಗಿರುತ್ತದೆ.
   2020-21 ನೇ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ
ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ)
ಯೋಜನೆಯಡಿ ಗ್ರಾಮ ಪಂಚಾಯತ್ ಮಟ್ಟಕ್ಕೆ ಮುಸುಕಿನ
ಜೋಳ (ಮಳೆ ಆಶ್ರಿತ) ಬೆಳೆÉಯನ್ನು ದಾವಣಗೆರೆ, ಹೊನ್ನಾಳಿ,
ನ್ಯಾಮತಿ, ಜಗಳೂರು, ಚನ್ನಗಿರಿ ತಾಲ್ಲೂಕುಗಳಿಗೆ ಹಾಗೂ
ಮುಸುಕಿನ ಜೋಳ (ಮಳೆ ಆಶ್ರಿತ), ಭತ್ತ (ನೀರಾವರಿ)
ಬೆಳೆಗಳನ್ನು ಹರಿಹರ ತಾಲ್ಲೂಕಿಗೆ ಅಧಿಸೂಚನೆ ಮಾಡಲಾಗಿದೆ.
ಈಗಾಗಲೇ ಈ ಯೋಜನೆಯ ಬಗ್ಗೆ ಜಿಲ್ಲೆಯಾದ್ಯಂತ
ಕರಪತ್ರ, ಟ್ಯಾಬೂಲೊ ಹಾಗೂ ಪತ್ರಿಕಾ ಪ್ರಕಟಣೆಯ
ಮೂಲಕ ಕೃಷಿ ಇಲಾಖೆಯಿಂದ ಹಾಗೂ ವಿಮಾ ಕಂಪನಿಯಿಂದ
ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದು, ರೈತರು ಅಧಿಸೂಚಿತ
ಬೆಳೆಗಳಿಗೆ ನೋಂದಾವಣೆ ಮಾಡಿಸುತ್ತಿದ್ದಾರೆ.
     ಭತ್ತ (ನೀರಾವರಿ), ಭತ್ತ (ಮಳೆಯಾಶ್ರಿತ), ಮುಸುಕಿನ
ಜೋಳ (ನೀರಾವರಿ), ಮುಸುಕಿನ ಜೋಳ (ಮಳೆಯಾಶ್ರಿತ),
ಜೋಳ (ಮಳೆ ಆಶ್ರಿತ), ಜೋಳ (ನೀರಾವರಿ), ರಾಗಿ (ಮಳೆ
ಆಶ್ರಿತ), ರಾಗಿ (ನೀರಾವರಿ). ನವಣೆ (ಮಳೆ ಆಶ್ರಿತ), ತೊಗರಿ (ಮಳೆ
ಆಶ್ರಿತ), ಶೇಂಗಾ (ಮಳೆ ಆಶ್ರಿತ), ಶೇಂಗಾ (ನೀರಾವರಿ), ಸಜ್ಜೆ
(ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ) ಬೆಳೆಗಳನ್ನು ಬೆಳೆ
ವಿಮೆಗೆ ನೋಂದಾಯಿಸಲು ಈ ತಿಂಗಳ 31ನೇ ತಾರೀಖು ಕೊನೆಯ
ದಿನವಾಗಿದೆ ಹಾಗೂ  ಸೂರ್ಯಕಾಂತಿ (ಮಳೆ ಆಶ್ರಿತ) ಹಾಗೂ
ಸೂರ್ಯಕಾಂತಿ (ನೀರಾವರಿ) ಬೆಳೆಯನ್ನು ನಮೂದಿಸಲು ಆಗಸ್ಟ್
ತಿಂಗಳ 14ನೇ ತಾರೀಖು ಕೊನೆಯ ದಿನವಾಗಿದ್ದು, ಅಂತಿಮ
ಸಮಯದಲ್ಲಿ ಜನದಟ್ಟಣೆಯಾಗುವ
ಸಾಧ್ಯತೆಯಿರುವುದರಿಂದ ರೈತರು ಬೆಳೆ ವಿಮೆಗೆ
ನೋಂದಾಯಿಸಲು ಕೊನೆಯ ದಿನದವರೆಗೆ ಕಾಯದೆ
ಮುಂಚಿತವಾಗಿಯೇ ಅವರವರ ವ್ಯಾಪ್ತಿಯಲ್ಲಿ ಬರುವ ಬ್ಯಾಂಕ್,
ಸಹಕಾರ ಸಂಘಗಳಲ್ಲಿ ಅಥವಾ ಸಾಮಾನ್ಯ ಸೇವಾ

ಕೇಂದ್ರಗಳಲ್ಲಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ
ದಾಖಲೆಗಳಾದ ಪಹಣಿ / ಖಾತೆ /ಪಾಸ್ ಪುಸ್ತಕ/ ಕಂದಾಯ ರಶೀದಿ
ಹಾಗೂ ಆಧಾರ ಸಂಖ್ಯೆ ಮಾಹಿತಿಯನ್ನು ನೀಡಿ, ವಿಮಾ ಕಂತನ್ನು
ಪಾವತಿಸಿ ಈ ಯೋಜನೆಯಡಿಯಲ್ಲಿ ನೋಂದಾಯಿಸಲು ತಿಳಿಸಿದೆ.
  ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರು
ಮುಂಗಾರು ಹಂಗಾಮಿಗೆ ಹೋಬಳಿ ಮಟ್ಟದಲ್ಲಿ ನೋಂದಣಿ
ಮಾಡಲು ಕಡೆಯ ದಿನಾಂಕ : ಭತ್ತ(ಮಳೆ ಆಶ್ರಿತ),
ಜೋಳ(ಮಳೆ ಆಶ್ರಿತ)(ನೀ), ರಾಗಿ(ಮಳೆ ಆಶ್ರಿತ)(ನೀ), ನವಣೆ
(ಮಳೆ ಆಶ್ರಿತ), ತೊಗರಿ(ಮಳೆ ಆಶ್ರಿತ), ಶೇಂಗಾ (ಮಳೆ ಆಶ್ರಿತ)
(ನೀ), ಸಜ್ಜೆ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ),
ಮುಸುಕಿನ ಜೋಳ (ನೀ) ಈ ಬೆಳೆಗಳನ್ನು ಬೆಳೆದ ರೈತರಿಗೆ
ಜು.31 ಕೊನೆಯದಿನವಾಗಿರುತ್ತದೆ.
 ಸೂರ್ಯಕಾಂತಿ (ಮಳೆ ಆಶ್ರಿತ) (ನೀ) ಈ ಬೆಳೆಗೆ ಆ.14
ಕೊನೆಯದಿನವಾಗಿರುತ್ತದೆ.
ಬೆಳೆ ಸಾಲ ಪಡೆದ ಮತ್ತು ಪಡೆಯದ ರೈತರಿಗೆ ಗ್ರಾಮ
ಪಂಚಾಯಿತಿ ಮಟ್ಟದ ಬೆಳೆ ವಿಮೆಗೆ ನೊಂದಾಯಿಸಲು ಕಡೆಯ
ದಿನಾಂಕದ ವಿವರ : ಭತ್ತ (ನೀ), ಮುಸುಕಿನ ಜೋಳ
(ಮಳೆಆಶ್ರಿತ)(ನೀ) ಇವರಿಗೆ ಜು.31 ನೊಂದಾಯಿಸಲು ಕೊನೆಯ
ದಿನಾಂಕವಾಗಿರುತ್ತದೆ.
     ರೈತಬಾಂಧವರು ನಿಗಧಿತ ದಿನಾಂಕದೊಳಗೆ ಬೆಳೆ ವಿಮೆಗೆ
ನೋಂದಾವಣಿ ಮಾಡಿಸಬೇಕೆಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *