ದಾವಣಗೆರೆ ಜು.18
ಕೋವಿಡ್-19(ಕೊರೋನಾ) ವೈರಸ್ ಸೋಂಕಿನಿಂದ ಮೃತಪಟ್ಟ
ಮುಸ್ಲಿಂ ಸಮುದಾಯದವರ ಘನತೆ ಪೂರ್ವ
ಶವಸಂಸ್ಕಾರಕ್ಕೆ ಖಬರಸ್ತಾನಗಳಲ್ಲಿ ಅಡ್ಡಿಪಡಿಸುವವರ ವಿರುದ್ದ
ಕಾನೂನು ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ವಕ್ಪ್
ಮಂಡಳಿ ಎಚ್ಚರಿಸಿದೆ.
ರಾಜ್ಯದ ಹಲವೆಡೆ ಕೋವಿಡ್-19 ಸೋಂಕಿನಿಂದ ಸಾವಿಗೀಡಾದ
ಮುಸ್ಲಿಂ ಬಾಂಧವರ ಶವಸಂಸ್ಕಾರಕ್ಕೆ ಖಬರಸ್ತಾನದಲ್ಲಿ ಸ್ಥಳ
ನೀಡಲು ನಿರಾಕರಿಸುತ್ತಿರುವ, ಅನಗತ್ಯ ಕಿರುಕುಳ
ನೀಡುತ್ತಿರುವ ವರದಿಗಳು ಬಂದಿವೆ. ಘನತೆಪೂರ್ಣ
ಅಂತ್ಯಸಂಸ್ಕಾರ ಪ್ರತಿಯೊಬ್ಬ ಮೃತ ವ್ಯಕ್ತಿಯ ಹಕ್ಕು. ಈ
ಹಕ್ಕಿಗೆ ಚ್ಯುತಿಯನ್ನುಂಟು ಮಾಡಲು ಯಾರಿಗೂ ಅವಕಾಶವಿಲ್ಲ.
ಹಾಗಾಗಿ ಇನ್ನು ಮುಂದೆ ಜಿಲ್ಲೆಯ ಮುಸ್ಲಿಂ ಬಾಂಧವರ
ಶವಸಂಸ್ಕಾರಕ್ಕೆ ತೊಂದರೆ ಉಂಟು ಮಾಡುವ ಸ್ಥಳ
ನಿರಾಕರಿಸುವ ಯಾವುದೇ ವ್ಯಕ್ತಿ ಅಥವಾ ವಕ್ಪ್ ಅಥವಾ ವಕ್ಪ್
ಸಂಸ್ಥೆಗಳ ವ್ಯವಸ್ಥಾಪನಾ
ಸಮಿತಿ/ಮುತವಲ್ಲಿ/ಆಡಳಿತಾಧಿಕಾರಿಯವರ ವಿರುದ್ದ ಕರ್ನಾಟಕ
ರಾಜ್ಯ ವಕ್ಪ್ ಮಂಡಳಿಯು ವಕ್ಫ್ ಕಾಯ್ದೆ 1995 ಹಾಗೂ ಭಾರತ
ದಂಡ ಸಂಹಿತೆ ಕಾನೂನು ರೀತ್ಯಾ ಕ್ರಮ
ಕೈಗೊಳ್ಳಲಾಗುವುದೆಂದು ಜಿಲ್ಲಾ ವಕ್ಪ್ ಸಲಹಾ ಸಮಿತಿ
ಅಧ್ಯಕ್ಷರಾದ ಮೊಹಮ್ಮದ್ ಸಿರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *