ದಾವಣಗೆರೆ ಜು.21
ಕೊರೊನಾ ಸಂದರ್ಭದಲ್ಲಿ ಅಸ್ಪತ್ರೆಗಳಲ್ಲಿರುವ
ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಜೈವಿಕ
ಮತ್ತು ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ
ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಹೇಳಿದರು.
ಮಂಗಳವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ
ಹಮ್ಮಿಕೊಳ್ಳಲಾಗಿದ್ದ ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣಾ
ಮೇಲ್ವಿಚಾರಣಾ ಸಮಿತಿಯ 2020-21ನೇ ಸಾಲಿನ ಪ್ರಥಮ
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊರೊನಾ ಸಂದರ್ಭದಲ್ಲಿ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಗಮನ
ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ವಸ್ತುಗಳ ನಿರ್ವಹಣೆ
ಅತ್ಯಂತ ವ್ಯವಸ್ಥಿತವಾಗಿ ಕೈಗೊಳ್ಳಬೇಕು. ತ್ಯಾಜ್ಯಗಳನ್ನು
ಸಂಸ್ಕರಿಸಿ ವಿಲೇವಾರಿ ಮಾಡುವ ಅಗತ್ಯವಿದೆ ಎಂದ ಅವರು, ಜಿಲ್ಲಾ
ಮಟ್ಟದಲ್ಲಿ ಜೀವ ವೈದ್ಯಕೀಯ ತ್ಯಾಜ್ಯ ವಿಲೇವಾರಿ ನಿಯಮಗಳ
ಪರಿಣಾಮಕಾರಿ ಅನುಷ್ಠಾನಗೊಳಿಸುವಿಕೆಗೆ ಜಿಲ್ಲಾ ಮಟ್ಟದಲ್ಲಿ
ಉಸ್ತುವಾರಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ದರ ನಿಗದಿ: ತ್ಯಾಜ್ಯಗಳನ್ನು ಸಂಸ್ಕರಿಸಿ ವಿಲೇವಾರಿ ಮಾಡಲು ಸರ್ಕಾರಿ
ಸಮುದಾಯ ಆರೋಗ್ಯ ಕೇಂದ್ರ, ಜನರಲ್ ಆಸ್ಪತ್ರೆ ಹಾಗೂ
ಜಿಲ್ಲಾ ಆಸ್ಪತ್ರೆಗಳಲ್ಲಿ ಒಂದು ಬೆಡ್‍ಗೆ ಸರ್ಕಾರಿ ಬೆಲೆ ನಿಗದಿಯಂತೆ
ರೂ. 7 ಹಾಗೂ ಸಿಸಿ ಸೆಂಟರ್‍ಗಳಲ್ಲಿ ರೂ.10 ರಂತೆ ಹಾಗೂ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಿಂಗಳಿಗೆ ರೂ.1.500
ರಂತೆ ಸಭೆಯಲ್ಲಿ ನಿಗದಿ ಪಡಿಸಿದರು.
ಇದೇ ವೇಳೆ ಸುಶಾಂತ್ ಎನ್ವಿಯರ್ನ್‍ಮೆಂಟಲ್ ಟೆಕ್ನಾಲಜಿಯ
ಮಹೇಶ್ ಮಾತನಾಡಿ, ಒಂದು ಬೆಡ್‍ಗೆ ರೂ.10 ಪಡೆದರೆ ನಮಗೆ
ನಷ್ಟವಾಗುತ್ತದೆ. ರೂ.15 ಆದರೂ ನಿಗದಿಪಡಿಸಿ ಎಂದು
ಕೇಳಿದರು. ಇದಕ್ಕೆ ಡಿಎಚ್‍ಓ ಡಾ.ರಾಘವೇಂದ್ರ ಸ್ವಾಮಿ
ಪ್ರತಿಕ್ರಿಯಿಸಿ, ಸ್ಪಲ್ಪ ದಿನಕ್ಕೆ ಇದೇ ದರವಿರಲಿ. ಕೇವಲ ಎರಡು
ತಿಂಗಳ ಮಾತ್ರ ಎಂದು ಸ್ಪಷ್ಟನೆ ನೀಡಿದರು. ಈ ವೇಳೆ ಡಿಸಿ
ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ನಿಮ್ಮದು ಒಂದು ಸೇವೆ
ಎಂದುಕೊಳ್ಳಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ
ಪೂಜಾರ ವೀರಮಲ್ಲಪ್ಪ, ಕೋವಿಡ್ ನೋಡಲ್ ಅಧಿಕಾರಿ
ಪ್ರಮೋದ ನಾಯಕ್, ಮಹಾನಗರಪಾಲಿಕೆ ಆಯುಕ್ತ
ವಿಶ್ವನಾಥ್ ಮುದಜ್ಜಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಾಗರಾಜ್,
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ
ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ ಸೇರಿದಂತೆ ಟಿಎಚ್‍ಓ
ಗಳು ಹಾಗೂ ವಿವಿಧ ಅಧಿಕಾರಿಗಳು ಹಾಜರಿದ್ದರು.