ದಾವಣಗೆರೆ ಜು.21
    ನೌಕರರಿಗೆ ವಿಶೇಷ ತರಬೇತಿ ಕಾರ್ಯಾಗಾರ, ಫೆಬ್ರವರಿ
ಹಾಗೂ ಹಿಂದಿನ ತಿಂಗಳ ನೌಕರರ ವೇತನ, ಸ್ವಯಂ ಚಾಲಿತ
ವೇತನ ಭಡ್ತಿ, ಜೇಷ್ಠತೆ, ವರ್ಗಾವಣೆ, ಗಳಿಕೆ ರÀಜೆ ಸೌಲಭ್ಯ,
ಖಾಲಿ ಇರುವ ಹುದ್ದೆಗಳ ಭರ್ತಿಗೆ ಶಿಫಾರಸು, ನೌಕರರ ವಸತಿ
ಗೃಹ ಸೇರಿದಂತೆ ವಿವಿಧ ಸಮಸ್ಯೆಗಳ ಬಗೆಗೆ ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಚರ್ಚೆ
ನಡೆಸಲಾಯಿತು.
    ಮಂಗಳವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ
ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಮಟ್ಟದ ಜಂಟಿ
ಸಮಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ
ಅವರು, ಜಿಲ್ಲಾ ಸರ್ಕಾರಿ ನೌಕರರರ ಸಮಸ್ಯೆಗಳಿಗೆ ಹಾಗೂ
ಬೇಡಿಕೆಗಳಿಗೆ ಈ ಹಿಂದೆ ಬಹಳಷ್ಟು ಸಕಾರತ್ಮಾಕವಾಗಿ
ಸ್ಪಂದಿಸಿದ್ದೇವೆ. ಅದರಂತೆ ಈ ಬಾರಿಯೂ ಸಮಸ್ಯೆ ಬಗೆಹರಿಸಲು
ಹಾಗೂ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು
ಎಂದು ಹೇಳಿದರು.
    ಕ್ರೀಡಾಂಗಣ ಹಾಗೂ ಸಮುಚ್ಚಯಕ್ಕೆ ಬೇಕಾದ ಜಾಗಕ್ಕೆ
ಸಂಬಂಧಪಟ್ಟಂತಹ ವಿಷಯದ ಕುರಿತು ನಮ್ಮ ಅಧೀನಕ್ಕೆ
ಒಳಪಡುವ ಜವಾಬ್ದಾರಿ ನಿಭಾಯಿಸುತ್ತೇವೆ. ದೂಡಾ ಹಾಗೂ
ಕಾರ್ಪೋರೇಷನ್ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಅನುಕೂಲ
ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
    ಕೆಲವು ವಿಷಯಗಳು ಹಾಗೂ ಸಮಸ್ಯೆಗಳು ನಮ್ಮ
ನಮ್ಮ ಹಂತದಲ್ಲಿಯೇ ಬಗೆಹರಿಸಿ ಪರಿಹಾರ
ಕೊಂಡುಕೊಳ್ಳಬಹುದಾಗಿದೆ. ಬದಲಾಗಿ ಸುಖಾ ಸಮ್ಮನೆ
ಮೇಲ್ಮಟ್ಟಕ್ಕೆ ಒಯ್ಯುವಂತೆ ಆಗಬಾರದು. ಸಮಾಜದ
ಕಟ್ಟಕಡೆಯ ವ್ಯಕ್ತಿ ಎಂದುಕೊಂಡು ನಾನು ನನ್ನ ಕೆಲಸ
ನಿರ್ವಹಿಸುತ್ತಿರುವೆ. ಅದೇ ರೀತಿ ಎಲ್ಲರೂ ಭಾವಿಸಿಕೊಂಡು ತಮ್ಮ
ಕೆಲಸ ಮಾಡಬೇಕು. ಯಾರೊಬ್ಬರು ದೂರದೇ ಹಾಗೂ

ಶೋಷಣೆಗೆ ಒಳಪಡದಂತಹ ಪೂರಕ
ವಾತಾವರಣದೊಳಗೆ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣ
ಆಗಬೇಕು ಎಂದರು.
    ನೀವಿಲ್ಲದೆ ಏನೂ ಸಾಧ್ಯವಿಲ್ಲ. ಮುಂಬರುವ ಪರಿಸ್ಥಿಯಲ್ಲಿ ಇನ್ನೂ
ಸಂದಿಗ್ಧ ವಾತಾವರಣ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಎಲ್ಲರೂ
ಒಟ್ಟಾಗಿ ಮುಂದೆ ಸಾಗೋಣ. ಆ ಮೂಲಕ ಜಿಲ್ಲೆಯಲ್ಲಿ ಮುಂದಿನ
ದಿನಗಳಲ್ಲಿ ಕೊರೊನಾ ನಿಯಂತ್ರಣ ವಿರುದ್ಧ ಹೋರಾಡಲು
ಎಲ್ಲರÀೂ ಕೈ ಜೋಡಿಸಬೇಕು. ಎಲ್ಲಾ ಸರ್ಕಾರಿ ನೌಕರರು
ಕೊರೊನಾ ಸಂದರ್ಭದಲ್ಲಿ ಮಾರ್ಚ್ ಮೊದಲ ವಾರದಿಂದ
ಇಲ್ಲಿಯವರೆಗೂ ತಮ್ಮನ್ನು ತಾವು ತೊಡಗಿಸಿಕೊಂಡು
ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ
ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರÀರಿಗೂ ಅಭಿನಂದನೆ ಸಲ್ಲಿಸಲು
ಇಷ್ಟಪಡುತ್ತೇನೆ ಎಂದು ತಿಳಿಸಿದರು.
    ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಪಾಲಾಕ್ಷಿ
ಮಾತನಾಡಿ, ಕೆಸಿಎಸ್‍ಆರ್, ಎಸ್‍ಆರ್ ಹಾಗೂ ಇಲಾಖೆಗಳಿಗೆ
ಸಂಬಂಧಪಟ್ಟಂತಹ ಹಾಗೂ ನೌಕರರಿಗೆ ಮತ್ತು ಅಧಿಕಾರಿ
ವರ್ಗದವರ ಉತ್ತಮ ಸಂಬಂಧಕ್ಕೆ ಪೂರಕವಾಗುವ
ರೀತಿಯಲ್ಲಿ ನೌಕರರಿಗೆ ವಿಶೇಷ ರೀತಿಯ ತರಬೇತಿ
ಕಾರ್ಯಾಗಾರ ಆಯೋಜಿಸಬೇಕು. ಕೆಲ ಇಲಾಖೆಗಳಲ್ಲಿ
ನೌಕರರಿಗೆ ಡಿಸೆಂಬರ್, ಜನವರಿ, ಫೆಬ್ರವರಿ ಮಾಹೆಯ ಸಂಬಳ
ಆಗಿರುವುದಿಲ್ಲ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಅಪರ
ಮುಖ್ಯ ಕಾರ್ಯದರ್ಶಿ ಅವರಿಗೆ ಪ್ರಸ್ತಾವನೆ
ಕಳುಹಿಸಿಕೊಡುವಂತೆ ಕೋರಿದರು.
    ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಶಿಫಾರಸ್ಸು
ಮಾಡಬೇಕು. ಇಡೀ ರಾಜ್ಯದಲ್ಲಿ 7.40 ಲಕ್ಷ ಮಂಜೂರಾತಿ ಇದೆ. ಆದರೆ
5.40 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 5 ಸಾವಿರ
ಹುದ್ದೆಗಳು ಖಾಲಿ ಇವೆ. ನಮಗೆ ಭರ್ತಿ ಮಾಡಿಕೊಳ್ಳುವ
ಅವಕಾಶವಿಲ್ಲದಿದ್ದರೂ ಕೂಡ ಹುದ್ದೆ ಭರ್ತಿ ಮಾಡುವಂತೆ
ಶಿಫಾರಸ್ಸು ಮಾಡಬಹುದಾಗಿದೆ ಎಂದು ತಿಳಿಸಿದರು.
    ನೌಕರರ ನಡುವಿನ ವ್ಯಾಜ್ಯ ಹಾಗೂ ಇತರ ನೌಕರರಿಗೆ
ನೀಡುತ್ತಿರುವ ಕಿರುಕುಳದ ಬಗ್ಗೆ ನೌಕರರ ಮನವಿ ಬಂದಿವೆ.
ಈ ಹಿನ್ನೆಲೆಯಲ್ಲಿ ಅಧಿಕಾರಿ ಮತ್ತು ನೌಕರರ ನಡುವೆ
ಸಾಮರಸ್ಯ, ಉತ್ತಮ ಬಾಂಧವ್ಯ ಮೂಡಿಸಲು ಜನಸ್ಪಂದನದ
ರೀತಿಯಲ್ಲಿ ನೌಕರರ ಸ್ಪಂದನ ಕಾರ್ಯಕ್ರಮ
ನಡೆಸಬೇಕು ಎಂದ ಅವರು ಸರ್ಕಾರಿ ನೌಕಕರಿಗೆ ಸಂಬಂಧಿಸಿದ
ಹಲವಾರು ವಿಷಯಗಳ ಕುರಿತು ಸಭೆಗೆ ತಿಳಿಸಿದರು.
  ಇದೇ ವೇಳೆ ಸಮುದಾಯ  ಭವನದ ಎದುರಿನ ತೆರೆದ
ಜಾಗವನ್ನು ನೌಕರರ ಸಂಘಕ್ಕೆ ಒಳಾಂಗಣ ಕ್ರೀಡೆಗಳಿಗೆ
ಮಂಜೂರು ಹಾಗೂ ನೌಕರರ ಸಮುಚ್ಚಯಕ್ಕೆ ಒಂದು
ಎಕರೆ ಜಮೀನು ಮಂಜೂರು ಸೇರಿದಂತೆ ನೌಕರರರ ವಿವಿಧ
ಬೇಡಿಕೆ ಈಡೇರಿಕೆಗೆ ಮನವಿ ಮಾಡಿದರು.
    ಇದೇ ಸಂದರ್ಭದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ
ಅಧ್ಯಕ್ಷÀರಿಂದ ತಾಲ್ಲೂಕಿನ ನೌಕರರ ಸಮಸ್ಯೆಗಳ ಬಗ್ಗೆ
ಚರ್ಚಿಸಲಾಯಿತು. ಸಭೆಯಲ್ಲಿ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ,
ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹೆಚ್ಚುವರಿ ಜಿಲ್ಲಾ
ಪೊಲೀಸ್ ಅಧೀಕ್ಷಕ ರಾಜೀವ್, ಡಿಎಚ್‍ಓ ಡಾ.ರಾಘವೇಂದ್ರ ಸ್ವಾಮಿ,
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಜಿಲ್ಲಾ

ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸೇರಿದಂತೆ
ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *