ದಾವಣಗೆರೆ ಜು.22
2020-21 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ
ಗ್ರಾಮೋದ್ಯಮ ಮತ್ತು ಸಣ್ಣ ಉದ್ಯಮಗಳ ಯೋಜನೆಯಡಿ
ಮಧುವನ ಮತ್ತು ಜೇನು ಸಾಕಾಣೆ ಅಭಿವೃದ್ಧಿ
ಕಾರ್ಯಕ್ರಮದಡಿ ಜೇನು ಸಾಕಾಣೆ ತರಬೇತಿ
ಕಾರ್ಯಕ್ರಮದಡಿ ಅರ್ಹ ಹಾಗೂ ಆಸಕ್ತ ರೈತ
ಫಲಾನುಭವಿಗಳು ತರಬೇತಿ ಪಡೆದುಕೊಳ್ಳಲು ತಮ್ಮ
ಹೆಸರನ್ನು ನೊಂದಾಯಿಸಿಕೊಳ್ಳಬಹುದು.
ಆಸಕ್ತ ರೈತ ಫಲಾನುಭವಿಗಳು ಈ ಕಛೇರಿ
ವೇಳೆಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು
ಕೋರಲಾಗಿದ್ದು, ಹೆಸರನ್ನು ನೋಂದಾಯಿಸಿಕೊಳ್ಳಲು ಜುಲೈ
31 ಕಡೆಯ ದಿನವಾಗಿದೆ. ಮೊದಲು ಬಂದವರಿಗೆ ಆದ್ಯತೆ.
ಹೆಚ್ಚಿನ ಮಾಹಿತಿಗಾಗಿ ಪವನ್‍ಕುಮಾರ್ ಹೆಚ್.ಎಸ್, ಸಹಾಯಕ
ತೋಟಗಾರಿಕೆ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಕಸಬಾ,
ಮೊಬೈಲ್ ಸಂ: 7022244152. ರವಿ, ಸಹಾಯಕ ತೋಟಗಾರಿಕೆ
ಅಧಿಕಾರಿ, ರೈತ ಸಂಪರ್ಕ ಕೇಂದ್ರ ಆನಗೋಡು, ಮೊಬೈಲ್
ಸಂ: 7019819101. ಏಕಾಂತ್, ಸಹಾಯಕ ತೋಟಗಾರಿಕೆ ಅಧಿಕಾರಿ,
ರೈತ ಸಂಪರ್ಕ ಕೇಂದ್ರ ಮಾಯಕೊಂಡ-1. ಮೊಬೈಲ್:
7899445111, ಅರುಣ್ ರಾಜ್ ಪಿ.ಎಲ್. ಸಹಾಯಕ ತೋಟಗಾರಿಕೆ ಅಧಿಕಾರಿ,
ರೈತ ಸಂಪರ್ಕ ಕೇಂದ್ರ ಮಾಯಕೊಂಡ-2, ಮೊಬೈಲ್:
8722551293 ಸಂಪರ್ಕಿಸಬಹುದು.
ಈ ಯೋಜನೆಯಡಿ ರೈತ ಬಾಂಧವರು ಶೀಘ್ರ ಹೆಸರನ್ನು
ನೋಂದಾಯಿಸಿಕೊಳ್ಳುವ ಮೂಲಕ ಯೋಜನೆಯ
ಸದುಪಯೋಗ ಪಡೆದುಕೊಳ್ಳಬೇಕೆಂದು ತೋಟಗಾರಿಕೆ
ಹಿರಿಯ ಸಹಾಯಕ ನಿರ್ದೇಶಕರಾದ ಟಿ.ಆರ್. ಶಶಿಕಲಾ ಇವರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.