ದಾವಣಗೆರೆ ಜು.22
ಭದ್ರಾ ಯೋಜನೆಯ ಅಚ್ಚುಕಟ್ಟಿನ 2020-21ನೇ ಸಾಲಿನ
ಮುಂಗಾರು ಹಂಗಾಮಿನ ಬೆಳೆಗಳಿಗೆ ಜು.22ರ
ಮಧ್ಯರಾತ್ರಿಯಿಂದ ಭದ್ರಾ ಬಲದಂಡೆ ನಾಲೆ, ಎಡದಂಡೆ
ನಾಲೆಗಳಲ್ಲಿ ನೀರನ್ನು ಹರಿಯ ಬಿಡಲಾಗುವುದು.
ಸಾರ್ವಜನಿಕ ಹಿತದೃಷ್ಟಿಯಿಂದ ಕಾಲುವೆ ಪಾತ್ರಗಳಲ್ಲಿ
ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು,
ದನಕರುಗಳನ್ನು ತೊಳೆಯುವುದು ಮತ್ತು
ದೈನಂದಿನ ಚಟುವಟಿಕೆಗಳನ್ನು ಮಾಡುವುದು
ಇತ್ಯಾದಿಗಳನ್ನು ನಿಷೇಧಿಸಲಾಗಿದೆ ಎಂದು ಭದ್ರಾ ಯೋಜನಾ
ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ
ಕುಡಿಯುವ ನೀರಾವರಿ ನಿಗಮ ನಿಯಮಿತ ಅಧೀಕ್ಷಕ
ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.