ದಾವವಣಗೆರೆ ಜು.23
ಕೋವಿಡ್-19 ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಶುಶ್ರೂಷಕರು,
ಪ್ರಯೋಗ ಶಾಲಾ ತಂತ್ರಜ್ಞರು, ಫಾರ್ಮಾಸಿಸ್ಟ್
ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ
ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊರೊನಾ ವೈರಸ್ ಪ್ರಕರಣಗಳನ್ನು ಸಮರ್ಪಕವಾಗಿ
ನಿಭಾಯಿಸಲು ಅನುಕೂಲವಾಗುವವಂತೆ ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಇವರ
ಅಧೀನದಲ್ಲಿ ಬರುವ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ
ಇರುವ ಹುದ್ದೆಗಳನ್ನು ತಾತ್ಕಾಲಿಕವಾಗಿ 6 ತಿಂಗಳ ಮಟ್ಟಿಗೆ
ಅಥವಾ ನೇರ ನೇಮಕಾತಿ ಮೂಲಕ ಹುದ್ದೆಗಳು
ಭರ್ತಿಯಾಗುವವರೆಗೆ ಇವುಗಳಲ್ಲಿ ಯಾವುದು ಮೊದಲು
ಅಲ್ಲಿಯವರೆಗೆ ಗುತ್ತಿಗೆ ಆಧಾರದ ಮೇಲೆ ನೇರ
ಸಂದರ್ಶನದ ಮುಖಾಂತರ ಮೆರಿಟ್ ಆಧಾರದ ಮೇಲೆ
ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ
ಕಚೇರಿ, ಎಸ್.ಎಸ್ ಹೈಟೆಕ್ ಆಸ್ಪತ್ರೆ ಹತ್ತಿರ ರಾಮನಗರರ
ರಸ್ತೆ ಎನ್.ಸಿ.ಸಿ ಕ್ಯಾಂಪ್ ಹತ್ತಿರ ದಾವಣಗೆರೆ ಇಲ್ಲಿ ನಡೆಯುವ ನೇರ
ಸಂದರ್ಶನಕ್ಕೆ ಸಂಬಂಧಪಟ್ಟ ಆಸಕ್ತÀ ಅಭ್ಯರ್ಥಿಗಳು
ಕಚೇರಿಯಲ್ಲಿ ಅರ್ಜಿ ಪಡೆದು ಜು.28ರೊಳಗಾಗಿ ಅವಶ್ಯಕ
ಪೂರಕ ದಾಖಲಾತಿಗಳೊಂದಿಗೆ (ವಿದ್ಯಾರ್ಹತೆ, ಗ್ರಾಮೀಣ, ಕನ್ನಡ
ಮಾಧ್ಯಮ, ಜಾತಿ ಪ್ರಮಾಣ ಪತ್ರ ಮೂಲ ಮತ್ತು ನಕಲು
ಪತ್ರಗಳೊಂದಿಗೆ) ಅರ್ಜಿ ಸಲ್ಲಿಸಬೇಕು. ಜು.30 ರಂದು ನೇರ
ಸಂದರ್ಶನಕ್ಕೆ ಹಾಜರಾಗಬೇಕು. ಆಯ್ಕೆಯಾದ
ಅಭ್ಯರ್ಥಿಗಳನ್ನು ಖಾಲಿ ಇರುವ ಹುದ್ದೆಗಳಿಗೆ ಭರ್ತಿ
ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿ ಡಾ.ರಾಘವೇಂದ್ರ ಸ್ವಾಮಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.