ಕೋವಿಡ್-19 ಸಾಂಕ್ರಾಮಿಕ ರೋಗದ ಸಮಸ್ಯೆಯಿಂದಾಗಿ ಕೈಮಗ್ಗ
ನೇಕಾರರರು ಸಂಕಷ್ಟದಲ್ಲಿರುವುದನ್ನು ಮನಗಂಡು ರಾಜ್ಯ
ಸರ್ಕಾರವು ಕೈಮಗ್ಗ ನೇಕಾರಿಕೆ ಹಾಗು ಇತರೆ ಕೈಮಗ್ಗ
ಚಟುವಟಿಕೆಗಳನ್ನು ನಡೆಸುವ ನೇಕಾರರಿಗೆ, ನೇಕಾರ ಸಮ್ಮಾನ್
ಯೋಜನೆಯಡಿ ವಾರ್ಷಿಕ ರೂ. 2000/- ಗಳ ಆರ್ಥಿಕ ನೆರವನ್ನು ಬ್ಯಾಂಕ್
ಖಾತೆಗಳಿಗೆ ನೇರವಾಗಿ ನೇರ ನಗದು ವರ್ಗಾವಣೆ ಮುಖಾಂತರÀ
ನೀಡುವುದಾಗಿ ಘೋಷಿಸಿದೆ.
ಈ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ನೇಕಾರರು
ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು ಪ್ರಸ್ತುತ ಕೈವiಗ್ಗ ನೇಕಾರಿಕೆ
ವೃತ್ತಿಯಲ್ಲಿ ಹಾಗು ಇತರೆ ಕೈಮಗ್ಗ ಚಟುವಟಿಕೆಗಳಲ್ಲಿ
ತೊಡಗಿರುವ ಅರ್ಹ ನೇಕಾರರು, ನಾಲ್ಕನೇ ರಾಷ್ಟ್ರೀಯ ಕೈಮಗ್ಗ
ಗಣತಿಯ ಪ್ರಕಾರ ನೊಂದಾಯಿಸಲಾದ ನೇಕಾರರಿಂದ ಸೇವಾಸಿಂಧು
ಆನ್‍ಲೈನ್ ಪೋರ್ಟಲ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈವರೆಗೂ ಅರ್ಜಿ
ಸಲ್ಲಿಸದೇ ಇರುವವರು ಅಂತಿಮವಾಗಿ ಅರ್ಜಿ ಸಲ್ಲಿಸಲು ಜುಲೈ 30
ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ
ಕಛೇರಿ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್,
ದಾವಣಗೆರೆ, ರಾಮಾಂಜನೇಯ ಪ್ಲಾಜಾ, ಕಾಲೇಜ್‍ರಸ್ತೆ, ನಿಟುವಳ್ಳಿ, ಕಛೇರಿ
ದೂರವಾಣಿ ಸಂಖ್ಯೆ:- 08192-262362 ಇವರನ್ನು ಸಂಪರ್ಕಿಸಬಹುದಾಗಿದೆ
ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *