ದಾವವಣಗೆರೆ ಜು.24
ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ
ಬಿ.ಎ.ಬಸವರಾಜ ಇವರು ಜು.27 ರ ಬೆಳಿಗ್ಗೆ 6 ಗಂಟೆಗೆ
ಬೆಂಗಳೂರಿನಿಂದ ಹೊರಟು 9.15 ಕ್ಕೆ ದಾವಣಗೆರೆ ತಲುಪುವರು.
ಬೆಳಿಗ್ಗೆ 11 ಗಂಟೆಗೆ ಸರ್ಕಾರ ಒಂದು ವರ್ಷ ಪೂರೈಸಿರುವ
ಹಿನ್ನೆಲೆಯಲ್ಲಿ ಸರ್ಕಾರದ ಕಾರ್ಯಕ್ರಮಗಳ ಅನಷ್ಟಾನ
ಹಾಗೂ ವಿವಿಧ ಯೋಜನೆಗಳಡಿಯ ಫಲಾನುಭವಿಗಳೊಂದಿಗೆ
ಮಾನ್ಯ ಮುಖ್ಯಮಂತ್ರಿಯವರ ಜೊತೆ ಜಿಲ್ಲಾಡಳಿತ ಭವನದ
ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿರುವ ವಿಡಿಯೋ
ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾನ್ಹ
2.30 ಗಂಟೆಗೆ ದಾವಣಗೆರೆಯಿಂದ ನಿರ್ಗಮಿಸುವರೆಂದು
ಪ್ರಕಟಣೆ ತಿಳಿಸಿದೆ.