ದಾವವಣಗೆರೆ ಜು.25
ಆಯುಷ್ ಇಲಾಖೆಯಿಂದ ಸರಬರಾಜು ಮಾಡಲ್ಪಟ್ಟಿರುವ
ಆಯುಷ್ ರೋಗನಿರೋಧಕ, ಶಕ್ತಿವರ್ಧಕ
ಔಷಧಿಗಳನ್ನು ಜು.23 ರಂದು ಪಾಲಿಕೆ ಆಯುಕ್ತರಾದ
ವಿಶ್ವನಾಥ ಮುದಜ್ಜಿ ಇವರ ಮೂಲಕ ಪಾಲಿಕೆ ಸಿಬ್ಬಂದಿಗೆ
ವಿತರಿಸಲಾಯಿತು. ಹೊನ್ನಾಳಿ ತಾಲ್ಲೂಕಿನ ಕುಂಬಳೂರಿನ ಸರ್ಕಾರಿ
ಆಯುರ್ವೇದ ಚಿಕಿತ್ಸಾಲಯದ ಡಾ.ಚಂದ್ರಕಾಂತ್.ಎಸ್
ನಾಗಸಮುದ್ರ ಇವರು ಆಯುಷ್ ರೋಗನಿರೋಧಕ
ಔಷಧಿಯನ್ನು ವಿತರಿಸಿ ಅದರ ಗುಣಗಳನ್ನು ಸಿಬ್ಬಂದಿಗಳಿಗೆ ವಿವರಿಸಿ
ಕೊರೊನಾ ವಿರುದ್ದ ಹೋರಾಡಲು ಸಹಕಾರಿಯಾಗಿದೆ ಎಂದರು.