ದಾವವಣಗೆರೆ ಜು.25
ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ
ಅವರ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಜು.26 ಕ್ಕೆ
ಒಂದು ವರ್ಷ ತುಂಬುತ್ತಿರುವ ಈ ಸುಸಂದರ್ಭದ
ಹಿನ್ನೆಲೆಯಲ್ಲಿ “ಜನಸ್ನೇಹಿ ಆಡಳಿತ ಒಂದು ವರ್ಷ; ಸವಾಲುಗಳ
ವರ್ಷ; ಪರಿಹಾರದ ಸ್ಪರ್ಶ” ನೇರ ಸಂವಾದ
ಕಾರ್ಯಕ್ರಮವನ್ನು ಜು.27 ರ ಬೆಳಿಗ್ಗೆ 11 ಗಂಟೆಗೆ
ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಏರ್ಪಡಿಸಿದ್ದು,
ಏಕ ಕಾಲದಲ್ಲಿ ರಾಜ್ಯದ್ಯಂತ ವಚ್ರ್ಯುವಲ್ ವೇದಿಕೆಯ ಮೂಲಕ
ನೇರ ಪ್ರಸಾರವಾಗಲಿದೆ.
ಸರ್ಕಾರದ ಒಂದು ವರ್ಷದ ಸಾಧನೆ ಕುರಿತು
ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಗಳು
ಸಂಪಾದಿಸಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಪ್ರಕಟಿಸಿರುವ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ
ಮುಖ್ಯಮಂತ್ರಿಗಳು ರಾಜ್ಯದ್ಯಂತದ
ಫಲಾನುಭವಿಗಳೊಂದಿಗೆ ನಡೆಸುವ ನೇರ ಸಂವಾದ
ಕಾರ್ಯಕ್ರಮದ ವಚ್ರ್ಯುವಲ್ ಮೀಟ್ ನೇರ ಪ್ರಸಾರವನ್ನು
ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಬೆಳಿಗ್ಗೆ 11
ಗಂಟೆಯಿಂದ ಏರ್ಪಡಿಸಲಾಗಿದೆ.
ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ
ವಚ್ರ್ಯುವಲ್ ವೇದಿಕೆ ಮೂಲಕ ಅಂದು
ಬಿ.ಎಸ್.ಯಡಿಯೂರಪ್ಪರವರ ಕುರಿತು ಮಾಧ್ಯಮ
ಸಲಹೆಗಾರರು ರಚಿಸಿರುವ ‘ಪುಟವಿಟ್ಟ ಚಿನ್ನ’ ಕೃತಿ ಬಿಡುಗಡೆ,
ಸಾಕ್ಷ್ಯಚಿತ್ರ ಪ್ರಸಾರ, ಮತ್ತಿತರ ಕಾರ್ಯಕ್ರಮಗಳು
ಪ್ರಸಾರವಾಗಲಿವೆ.
ಈ ವಿಡಿಯೋ ಸಂವಾದ ಕಾರ್ಯಕ್ರಮ ರಾಜ್ಯದ್ಯಂತ ಎಲ್ಲ
ಜಿಲ್ಲೆಗಳಲ್ಲಿ ಆಯೋಜಿಸಲಾಗಿದ್ದು ಏಕ ಕಾಲದಲ್ಲಿ ಆನ್ಲೈನ್ನಲ್ಲಿ ಈ
ವಚ್ರ್ಯುವಲ್ ಮೀಟಿಂಗ್ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ
11.30 ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳಾದ
ಬಿ.ಎಸ್.ಯಡಿಯೂರಪ್ಪನವರು ಕಾರ್ಯಕ್ರಮ
ಉದ್ಘಾಟಿಸುವರು.
ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ,
ಸ್ಥಳೀಯ ಶಾಸಕರು, ಜಿ.ಪಂ ಅಧ್ಯಕ್ಷರು, ಪಾಲಿಕೆ
ಮಹಾಪೌರರು, ಜನಪ್ರತಿನಿಧಿಗಳು, ಗಣ್ಯರು,
ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಜಿ.ಪಂ ಸಿಇಓ
ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು, ವಿವಿಧ ಯೋಜನೆಗಳ
ಫಲಾನುಭವಿಗಳು, ಕೋವಿಡ್ನಿಂದ ಗುಣಮುಖರಾದ
ವ್ಯಕ್ತಿಗಳು ಜಿಲ್ಲಾಡಳಿತ ಭವನದ ತುಂಗಭದ್ರ
ಸಭಾಂಗಣದಲ್ಲಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.