ದಾವವಣಗೆರೆ ಜು.27
ಆ.1 ರಂದು ಬಕ್ರೀದ್ ಹಬ್ಬ ಆಚರಣೆ ಇದ್ದು ಕೋವಿಡ್ 19 ರ
ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯನ್ನು
(ನಮಾಜ್) ಈದ್ಗಾಗಳಲ್ಲಿ ನಿರ್ಬಂಧಿಸಲಾಗಿದೆ.
ಸಾಮೂಹಿಕ ಪ್ರಾರ್ಥನೆಗೆ ಮಸೀದಿಗಳಲ್ಲಿ ಮಾತ್ರ ಅವಕಾಶ
ನೀಡಲಾಗಿದ್ದು ದಿ: 06-06-2020 ರ ಸುತ್ತೋಲೆಯ ಆದೇಶದಂತೆ
ವಕ್ಫ್ ಸಂಸ್ಥೆಗಳ ವ್ಯವಸ್ಥಾಪನಾ ಸಮಿತಿಯವರು ಕೇವಲ 50
ಜನರಿಗೆ ಮಾತ್ರ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ
ರೀತಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲು ವ್ಯವಸ್ಥೆ
ಮಾಡುವುದು. ಹೆಚ್ಚು ಜನರು ಸೇರಿದರೆ ಅವರಿಗೆ
ಪ್ರತ್ಯೇಕವಾಗಿ 2 ರಿಂದ 3 ಬ್ಯಾಚ್‍ಗಳನ್ನು ಮಾಡಿ ಪ್ರಾರ್ಥನೆ
ಮಾಡಲು ಅವಕಾಶ ಕಲ್ಪಿಸುವುದು.
ಮಸೀದಿಗಳನ್ನು ಹೊರತುಪಡಿಸಿ ಇತರೆ ಯಾವುದೇ
ಸ್ಥಳಗಳಲ್ಲಿ ಸಭಾಂಗಣ, ಸಮುದಾಯ ಭವನ, ಶಾದಿಮಹಲ್
ಮತ್ತಿತರೆ ತೆರೆದ ಜಾಗಗಳಲ್ಲಿ ಬಕ್ರೀದ್ ಸಾಮೂಹಿಕ
ಪ್ರಾರ್ಥನೆಯನ್ನು ಆಚರಿಸುವಂತಿಲ್ಲ ಎಂದು ಸರ್ಕಾರ
ಆದೇಶಿಸಿದ್ದು ಈ ನಿಯಮಗಳನ್ನು ಪಾಲಿಸಬೇಕೆಂದು ಜಿಲ್ಲಾ ವಕ್ಫ್
ಸಲಹಾ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *