ದಾವಣಗೆರೆ ಜು.27
ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ
ಅವರ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಜು.26 ಕ್ಕೆ
ಒಂದು ವರ್ಷ ತುಂಬಿರುವ ಈ ಸುಸಂದರ್ಭದ ಹಿನ್ನೆಲೆಯಲ್ಲಿ
ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ
“ಜನಸ್ನೇಹಿ ಆಡಳಿತ ಒಂದು ವರ್ಷ; ಸವಾಲುಗಳ ವರ್ಷ;
ಪರಿಹಾರದ ಸ್ಪರ್ಶ” ನೇರ ಸಂವಾದ ಕಾರ್ಯಕ್ರಮವು
ವಚ್ರ್ಯುವಲ್ ವೇದಿಕೆಯ ಮೂಲಕ ನಡೆಯಿತು.
ಈ ಕಾರ್ಯಕ್ರಮಕ್ಕೆ ವಿಧಾನಸೌಧದ ಬ್ಯಾಂಕ್ವೆಟ್‍ಹಾಲ್‍ನಲ್ಲಿ
ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಿ, ಸರ್ಕಾರದ ಒಂದು
ವರ್ಷದ ಪ್ರಗತಿ ವಿವರ ಒಳಗೊಂಡ ವಿಶೇಷ ಪುಸ್ತಕ
‘ಸವಾಲುಗಳ 1 ವರ್ಷ ಪರಿಹಾರದ ಸ್ಪರ್ಶ’ ಹಾಗೂ ವಾರ್ತಾ
ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆಯ “ಜನಪದ ಹಾಗೂ
ಮಾರ್ಚ್ ಆಫ್ ಕರ್ನಾಟಕ” ಮಾಸಿಕಗಳನ್ನು
ಬಿಡುಗಡೆಗೊಳಿಸಿದರು. ವಚ್ರ್ಯುವಲ್ ವೇದಿಕೆ ಮೂಲಕ ಈ
ನೇರ ಪ್ರಸಾರ ಹೊಂದಿದ್ದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಈ
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ ಇವರು ಶಾಸಕರು,
ಸಂಸದರು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸರ್ಕಾರದ
ಒಂದು ವರ್ಷದ ಪ್ರಗತಿ ವಿವರ ಒಳಗೊಂಡ ವಿಶೇಷ
ಪುಸ್ತಕ ‘ಸವಾಲುಗಳ 1 ವರ್ಷ ಪರಿಹಾರದ ಸ್ಪರ್ಶ’ ಹಾಗೂ
ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆಯ “ಜನಪದ
ಹಾಗೂ ಮಾರ್ಚ್ ಆಫ್ ಕರ್ನಾಟಕ” ಮಾಸಿಕಗಳನ್ನು
ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ್,
ಎಸ್.ವಿ.ರಾಮಚಂದ್ರಪ್ಪ, ಪ್ರೊ.ಲಿಂಗಣ್ಣ ಜಿಪಂ ಅಧ್ಯಕ್ಷೆ ದೀಪಾ
ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ ಗಂಗಾನಾಯ್ಕ್, ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ, ಪೊಲೀಸ್ ವರಿಷ್ಟಾಧಿಕಾರಿ
ಹನುಮಂತರಾಯ, ಜಿಪಂ ಸಿಇಓ ಪದ್ಮಾ ಬಸವಂತಪ, ಅಪರ
ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾದಿಕಾರಿ ಮಮತಾ
ಹೂಸಗೌಡರ್ ನಗರಾಭಿವೃದ್ದಿಕೋಶದ ಯೋಜನಾ ನಿರ್ದೇಶಕಿ
ನಜ್ಮಾ, ಡಿಹೆಚ್‍ಓ ಡಾ. ರಾಘವೇಂದ್ರಸ್ವಾಮಿ, ಡಿ.ಎಸ್ ಡಾ. ನಾಗರಾಜ್, ಡಿಎಸ್‍ಓ
ಡಾ. ರಾಘವನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ
ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್ ಹಾಗೂ ಇತರೆ
ಅಧಿಕಾರಿಗಳು ಹಾಗೂ ವಿವಿಧ ಯೋಜನೆಗಳ
ಫಲಾನುಭವಿಗಳು ಹಾಜರಿದ್ದರು.
ಮುಖ್ಯಮಂತ್ರಿಗಳ ಕಾರ್ಯಕ್ರಮ : ವಿಧಾನಸೌಧದ
ಬ್ಯಾಂಕೆಟ್ ಹಾಲ್‍ನಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಮಾನ್ಯ
ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು
ಮಾತನಾಡಿ, ರಾಜ್ಯದ ಸರ್ವಾಂಗೀಣ ಅಭಿವೃದ್ದಿಯೇ ನನ್ನ ಗುರಿ. ಈ
ನಿಟ್ಟಿನಲ್ಲಿ ನನ್ನ ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ
ಮಾಡುತ್ತಿದ್ದೇನೆ. ಈ ಗುರಿ ತಲುಪಲು ಸಚಿವ ಸಂಪುಟದ
ಸದಸ್ಯರು, ಶಾಸಕರು, ಸಂಸದರು, ಜನಪ್ರತಿನಿಧಿಗಳು,
ಅಧಿಕಾರಿಗಳು ನನಗೆ ಸಹಕರಿಸುತ್ತಾ ಬಂದಿದ್ದಾರೆ ಎಂದರು.
ಸರ್ಕಾರ ರಚನೆಯಾದ ಸಮಯದಲ್ಲಿ ಬರಗಾಲವಿತ್ತು.
ನಂತರ ನೆರೆಗೆ ಸುಮಾರು 1 ಲಕ್ಷ ಮನೆಗಳು
ನೆಲಸಮವಾಗಿದ್ದು ಅಗ್ನಿಪರೀಕ್ಷೆ ಎದುರಾಗಿತ್ತು. ಸಚಿವ
ಸಂಪುಟವೂ ರಚನೆಯಾಗದೇ ಏಕಾಂಗಿಯಾಗಿ ಆ ಸಮಯದಲ್ಲಿ
ಕೆಲಸ ಮಾಡಿದೆ. ವಸತಿ ಕಳೆದುಕೊಂಡವರಿಗೆ ವಸತಿ
ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಧನ ಸಹಾಯ
ಒದಗಿಸಲಾಯಿತು. ಮಾನ್ಯ ಪ್ರಧಾನಮಂತ್ರಿಯವರು
ರೈತರ ನೆರವಿಗೆ ಘೋಷಿಸಿದ ಕಿಸಾನ್ ಸಮ್ಮಾನ್
ಯೋಜನೆಯನ್ನು ಸ್ಪೂರ್ತಿಯಾಗಿ ಪಡೆದು ರಾಜ್ಯದಲ್ಲೂ
ಜಾರಿಗೆ ತಂದು ರೈತರಿಗೆ ಹೆಚ್ಚುವರಿಯಾಗಿ ಎರಡು
ಕಂತುಗಳಲ್ಲಿ ರೂ.2 ಸಾವಿರ ನೀಡಲಾಗಿದೆ.
ವಿಶ್ವಕ್ಕೇ ಬಂದೊದಗಿದ ವಿಪತ್ತು ಕೋವಿಡ್ ಹಿನ್ನೆಲೆಯಲ್ಲಿ
ಒಂದು ವರ್ಷದಲ್ಲಿ ಸಾಧನೆ ಕುಂಠಿತವಾಗಿದೆ. ಈ ಬಗ್ಗೆ
ನೆನೆಸಿಕೊಂಡರೆ ದುಖಃ ಆಗುತ್ತದೆ. ಕೋವಿಡ್ ಇಲ್ಲದಿದ್ದರೆ
ರಾಜ್ಯದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು
ನಡೆಯುತ್ತಿದ್ದವು. ಇನ್ನು ಮೂರು ವರ್ಷದಲ್ಲಿ ಮಾಡುವ
ಕೆಲಸ ಹಲವಾರು ಇವೆ.
ರೈತರು, ಕಾರ್ಮಿಕರು, ನೇಕಾರರು, ಪರಿಶಿಷ್ಟ ಜಾತಿ,
ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ವರ್ಗಗಳು
ಸ್ವಾಭಿಮಾನದಿಂದ ಬದುಕುವಂತಹ ಸ್ಥಿತಿ ಬರಬೇಕೆಂಬುದು
ನನ್ನ ಅಪೇಕ್ಷೆ. ಇನ್ನು ಮೂರು ವರ್ಷಗಳಲ್ಲಿ ಮನೆ ಇಲ್ಲದೇ
ಯಾರು ಇರಬಾರದೆಂಬುದು ನಮ್ಮ ಸರ್ಕಾರದ ಆಶಯ.
ಪ್ರಸಕ್ತ ಸಾಲಿನಲ್ಲಿ ನೇಕಾರರ ಸಾಲ ಮನ್ನಾ, ನನ್ನ ಬೆಳೆ
ನನ್ನ ಹಕ್ಕು ಎಂಬ ಉದ್ದೇಶದಿಂದ ಎಪಿಎಂಸಿ ಕಾಯ್ದೆ ತಿದ್ದುಪಡಿ
ಮೂಲಕ ರೈತ ತಾನು ಬೆಳೆದ ಬೆಳೆಯನ್ನು ಎಲ್ಲಿಯಾದರೂ,
ಯಾವ ಮಾರುಕಟ್ಟೆಯಲ್ಲಾದರೂ ಮಾರುವ ಅವಕಾಶ
ಒದಗಿಸಲಾಗಿದೆ. ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿಯ
ಮೂಲಕ ಉದ್ಯೋಗಾವಕಾಶಕ್ಕೆ ಒತ್ತು ನೀಡಲಾಗಿದೆ. ಗ್ರಾಮೀಣ
ರಸ್ತೆಗಳಿಗೆ, ರಾಷ್ಟ್ರೀಯ ಹೆದ್ದಾರಿಗಳಿಗೆ, ನೀರಾವರಿ
ಯೋಜನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
ಬೆಂಗಳೂರು ನಗರ ಸುಧಾರಣೆಗೆ ಬ್ಲೂಪ್ರಿಂಟ್ ಸಿದ್ದವಾಗಿದೆ.
ರಾಜ್ಯದ ಸರ್ವಾಂಗೀಣ ಅಭಿವೃದ್ದಿಗಾಗಿ ಅಸಮತೋಲನದ ಅತೃಪ್ತಿ
ಹೋಗಲಾಡಿಸಲು ಡಾ.ನಂಜುಂಡಪ್ಪ ವರದಿಯನ್ನು ಜಾರಿಗೆ
ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಹಿಂದುಳಿದ ತಾಲ್ಲೂಕುಗಳು, ಹೈದರಾಬಾದ್ ಕರ್ನಾಟಕವನ್ನು
ಅಕ್ಷರಶಃ ಕಲ್ಯಾಣ ಕರ್ನಾಟಕ ಮಾಡಲು ಸಂಕಲ್ಪ ಮಾಡಲಾಗಿದೆ.
ಅಭಿವೃದ್ದಿ ಪಥ ಒಂದೇ ನನ್ನ ಉದ್ದೇಶವಾಗಿದ್ದು ಕಾನೂನು
ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ.
ದೇವರ ಕೃಪೆಯಿಂದ ಈ ಬಾರಿ ಒಳ್ಳೆಯ ಮಳೆ ಆಗಿ
ಜಲಾಶಯಗಳು, ಕೆರೆ ಕಟ್ಟೆಗಳು ತುಂಬಿ ಶೇ.90
ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಎಲ್ಲ ಜನತೆ
ಗೌರವಯುತವಾಗಿ ಬದುಕುವಂತಹ ವ್ಯವಸ್ಥೆ ನಿರ್ಮಾಣ
ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಕೋವಿಡ್ ಜೊತೆ ಜೊತೆಗೆ ಬದುಕುವುದನ್ನು
ರೂಢಿಸಿಕೊಂಡು ಅಭಿವೃದ್ದಿಯ ಹಾದಿಯಲ್ಲಿ ಸಾಗಬೇಕಿದೆ.
ನಮ್ಮಲ್ಲಿ ಹೇರಳ ನೈಸರ್ಗಿಕ ಸಂಪತ್ತು ಇದೆ. ಇದನ್ನು
ಸದುಪಯೋಗಪಡಿಸಿಕೊಂಡು ನಾಡು ಕಟ್ಟೋಣ ಎಂದ
ಅವರು ಕೋವಿಡ್‍ನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ
ಎಲ್ಲರಿಗೂ ಹಾಗೂ ಈ ಕಾರ್ಯಕ್ರಮದ ಯಶಸ್ಸಿಗೆ
ಕಾರಣರಾದವರೆಲ್ಲರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ಒಂದು ವರ್ಷದ ಸಾಧನೆ
ಕುರಿತು ಮುಖ್ಯಮಂತ್ರಿಗಳ ಮಾಧ್ಯಮ
ಕಾರ್ಯದರ್ಶಿಗಳು ಸಂಪಾದಿಸಿ, ವಾರ್ತಾ ಮತ್ತು ಸಾರ್ವಜನಿಕ
ಸಂಪರ್ಕ ಇಲಾಖೆ ಪ್ರಕಟಿಸಿರುವ ಪುಸ್ತಕ
ಬಿಡುಗಡೆಗೊಳಿಸಲಾಯಿತು. ಬಿ.ಎಸ್.ಯಡಿಯೂರಪ್ಪರವರ
ಕುರಿತು ಮಾಧ್ಯಮ ಸಲಹೆಗಾರರು ರಚಿಸಿರುವ ‘ಪುಟವಿಟ್ಟ ಚಿನ್ನ’
ಕೃತಿ ಬಿಡುಗಡೆಗೊಳಿಸಿ, ಅವರ ಕುರಿತಾದ ಸಾಕ್ಷ್ಯಚಿತ್ರ
ಪ್ರಸಾರವಾಯಿತು.
ನಂತರ ರಾಜ್ಯದ 11 ಜಿಲ್ಲೆಗಳ ಕೋವಿಡ್ ಗೆದ್ದ ಹಾಗೂ ವಿವಿಧ
ಫಲಾನುಭವಿಗಳೊಂದಿಗೆ ಮಾನ್ಯ ಮುಖ್ಯÀುಂತ್ರಿಗಳು
ಸಂವಾದ ನಡೆಸಿದರು. ಉಪಮುಖ್ಯಮಂತ್ರಿಗಳಾದ ಗೋವಿಂದ
ಕಾರಜೋಳ, ಡಾ.ಅಶ್ವತ್ ನಾರಾಯಣ ಮಾತನಾಡಿದರು.
ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು
ಪಾಲ್ಗೊಂಡಿದ್ದರು.